ಮೊಸಳೆ ಸೆರೆ ಹಿಡಿದ ಗ್ರಾಮಸ್ಥರು

ಮೊಸಳೆ ಸೆರೆ ಹಿಡಿದ ಗ್ರಾಮಸ್ಥರು

ಬೆಳಗಾವಿ,ಆ. 28 : ಕಾಲುವೆಯಿಂದ ಹೊರಬಂದು ಜಿಲ್ಲೆಯ ರಾಯಬಾಗ ಪಟ್ಟಣದ ಹೊರವಲಯ ಬಾವಿಯೊಂದರಲ್ಲಿ 7 ಅಡಿ ಉದ್ದದ ಮೊಸಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾಯಬಾಗ ಉಪ ಕಾಲುವೆಯ ನೀರಲ್ಲಿ ಬಂದ ಮೊಸಳೆ ಹೊರವಲಯದಲ್ಲಿದ್ದ 25 ಅಡಿ ಆಳದ ಬಾವಿಯನ್ನು ಸೇರಿ 4 ದಿನಗಳಿಂದ ಇದೇ ಬಾವಿಯಲ್ಲಿ ಮೊಸಳೆ ಇರೋದನ್ನು ಕುರಿಗಾಹಿಗಳು ಗಮನಿಸಿ ಸ್ಥಳೀಯರಿಗೆ ತಿಳಿಸಿದ್ದರು. ಬಳಿಕ ಸ್ಥಳೀಯರು ಮೊಸಳೆ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದರು. ಸ್ಥಳಕ್ಕೆ ಬಂದ ಸಿಬ್ಬಂದಿ ಜೊತೆಗೆ ಸ್ಥಳೀಯರು ಕೂಡ ಕೈಜೊಡಿಸಿ ಹರಸಾಹಸಪಟ್ಟು ಮೊಸಳೆಯನ್ನು ಸೆರೆ ಹಿಡಿದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos