ನುಗ್ಗೆ ಸೊಪ್ಪು ತಿನ್ನುವುದರಿಂದ ನಮ್ಮ ಆರೋಗ್ಯ ವೃದ್ದಿಯಾಗುತ್ತದೆ

ನುಗ್ಗೆ ಸೊಪ್ಪು ತಿನ್ನುವುದರಿಂದ ನಮ್ಮ ಆರೋಗ್ಯ ವೃದ್ದಿಯಾಗುತ್ತದೆ

ಬೆಂಗಳೂರು: ಆಯುರ್ವೇದದಲ್ಲಿ ಸಹ ಇದನ್ನು ಬಹಳ ವರ್ಷಗಳಿಂದ ಹಲವು ರೋಗಗಳ ಪರಿಹಾರಕ್ಕೆ ಬಳಸಲಾಗುತಿದೆ. ಆದರೆ ನುಗ್ಗೆ ಸೊಪ್ಪಿನಲ್ಲಿ ಕಹಿಯ ಅಂಶವಿರುವ ಕಾರಣ ಹಲವಾರು ಜನರು ಸೇವಿಸಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ನುಗ್ಗೆ ಸೊಪ್ಪಿನಲ್ಲಿ ಬಹಳಷ್ಟು ಆರೋಗ್ಯಯುತ ಅಂಶಗಳಿದ್ದು, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಎ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿದೆ. ನುಗ್ಗೆ ಆಂಟಿಫಂಗಲ್, ಆಂಟಿವೈರಲ್, ಖಿನ್ನತೆ ಸೇರಿದಂತೆ ಉರಿಯೂತಗಳನ್ನು ಶಮನ ಮಾಡುವ ಆರೋಗ್ಯಕರ ಗುಣವನ್ನು ಹೊಂದಿದೆ.

ನುಗ್ಗೆ ಸೊಪ್ಪು ಆರೋಗ್ಯಕ್ಕೆ ಮಾತ್ರ ಉಪಯುಕ್ತವಲ್ಲ. ಇದರ ಎಣ್ಣೆ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ನುಗ್ಗೆ ಸೊಪ್ಪಿನಲ್ಲಿರುವ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಎ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಇತ್ಯಾದಿ ಹೆಚ್ಚಿನ ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ನುಗ್ಗೆ ಸೊಪ್ಪು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹಿಗಳಿಗೆ ಹೆಚ್ಚು ನುಗ್ಗೆ ಸೊಪ್ಪಿನ ಬಳಕೆ ಮಾಡಲು ವೈದ್ಯರು ಸಲಹೆ ನೀಡುತ್ತಾರೆ.

ಉತ್ತಮ ಮೂಳೆಗಳ ಆರೋಗ್ಯಕ್ಕೆ ನುಗ್ಗೆ ಸೊಪ್ಪು ಉತ್ತಮ ಮೂಳೆಗಳ ಆರೋಗ್ಯವನ್ನು ಉತ್ತೇಜಿಸುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ಉರಿಯೂತದ ಗುಣಲಕ್ಷಣಗಳು ಆಸ್ಟಿಯೊಪೊರೋಸಿಸ್ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ.

ನುಗ್ಗೆ ಸೊಪ್ಪು ಕ್ಯಾಲ್ಸಿಯಂ ಮತ್ತು ರಂಜಕದ ಸಮೃದ್ಧ ಮೂಲವಾಗಿದ್ದು, ಇದು ಉತ್ತಮ ಮೂಳೆಗಳ ಆರೋಗ್ಯವನ್ನು ಉತ್ತೇಜಿಸುತ್ತದೆ. ದೇಹದಲ್ಲಿನ ಹೆಚ್ಚು ಸ್ನಾಯು ಸೆಳೆತ, ನೋವು ಕಂಡು ಬಂದಲ್ಲಿ ನುಗ್ಗೆ ಸೊಪ್ಪಿನ ಆಹಾರ ಪದಾರ್ಥವನ್ನು ನಿಯಮಿತವಾಗಿ ಸೇವಿಸಿ ನೋಡಿ, ಬೇಗನೆ ನೋವಿನಿಂದ ಮುಕ್ತಿ ಸಿಗುತ್ತದೆ.

ಇನ್ನೂ ನುಗ್ಗೆ ಸೊಪ್ಪಿನಲ್ಲಿರುವ ಸಾರಗಳು ಮಲಬದ್ಧತೆ, ಜಠರದಲ್ಲಿ ಕಂಡು ಬರುವ ಉರಿತ ಮತ್ತು ಅಲ್ಸರೇಟಿವ್ ಕೊಲೈಟಿಸ್ ರೋಗಗಳಿಗೆ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ನುಗ್ಗೆ ಸೊಪ್ಪಿನಲ್ಲಿ ಹೆಚ್ಚಿನ ವಿಟಮಿನ್ ಬಿ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos