170ಕ್ಕೂ ಹೆಚ್ಚು ಪ್ರಯಾಣಿಕರು ಸಾವು

170ಕ್ಕೂ ಹೆಚ್ಚು ಪ್ರಯಾಣಿಕರು ಸಾವು

ಟೆಹ್ರಾನ್. ಜ, 8 : 170 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಉಕ್ರೇನ್ ವಿಮಾನ ಬುಧವಾರ ಬೆಳಗ್ಗೆ ಟೆಹ್ರಾನ್ ವಿಮಾನ ನಿಲ್ದಾಣ ಸಮೀಪ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಇರಾನ್ ನ ಮಾಧ್ಯಮ ವರದಿ ಮಾಡಿದೆ.

ಇಮಾಮ್ ಖೊಮೈನಿ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ತಾಂತ್ರಿಕ ತೊಂದರೆಯಿಂದ ಅಪಘಾತಕ್ಕೀಡಾಗಿರಬಹುದು ಎಂದು ಪ್ರಾಥಮಿಕ ವರದಿ ಹೇಳಿದೆ. ಟೆಹ್ರಾನ್ ನ ನೈರುತ್ಯ ಭಾಗದಲ್ಲಿ ಈ ಅಪಘಾತ ಸಂಭವಿಸಿದ್ದು ತನಿಖಾ ತಂಡ ಸದ್ಯ ಅಲ್ಲಿಗೆ ತಲುಪಿ ತನಿಖೆ ನಡೆಸುತ್ತಿದೆ ಎಂದು ನಾಗರಿಕ ವಿಮಾನಯಾನ ವಕ್ತಾರ ರೆಜಾ ಜಾಫರ್ಜಾಡೆ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos