ಕೋತಿಗಳ ಕಾಟಕ್ಕೆ ಬ್ರೇಕ್ ಹಾಕಲು ಸಾರ್ವಾಜನಿಕರ ಮೋರೆ

ಕೋತಿಗಳ ಕಾಟಕ್ಕೆ ಬ್ರೇಕ್ ಹಾಕಲು ಸಾರ್ವಾಜನಿಕರ ಮೋರೆ

ಜಡಿಗೇನಹಳ್ಳಿ, ಜು. 10 : ಹೊಸಕೋಟೆ ತಾಲ್ಲೂಕು  ಹೋಬಳಿಯಯ ಕೆಲವು ಗ್ರಾಮಗಳಲ್ಲಿ ಕೋತಿಗಳ ಹಾವಳಿ ಜೋರಾಗಿದ್ದು ಮಹಿಳೆಯರು ಮತ್ತು ಮಕ್ಕಳು ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಅಕ್ಕ ಪಕ್ಕ ಅರಣ್ಯ ಪ್ರದೇಶ ಮತ್ತು ತೋಟಗಳಿದ್ದು,  ಗ್ರಾಮದ ಜನರು ನೇಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು ಈ ಕೋತಿಗಳ ಹಾವಳಿಂದ ಜನರು ಭಯದಿಂದ ಜೀವನ ಮಾಡುವುದು ದುಸ್ಥರವೆನ್ನಿಸಿದೆ. ಕಳೆದ 6 ತಿಂಗಳಿಂದ ಗುಂಪು ಗುಂಪಾಗಿ ಮನೆಗಳ ಮೇಲೆ ದಾಳಿ ಮಾಡಿ ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಡಿ ಅವುಗಳಿಗೆ ತಿನ್ನಲು ಬೇಕಾದನ್ನು ಎತ್ತಿಕೊಂಡು ಹೋಗುತ್ತಿದ್ದವು. ಆದರೆ ಕೆಲವು ತಿಂಗಳುಗಳಿಂದ ಗುಂಪಿನಲ್ಲಿ ಒಂದು ದೊಡ್ಡ ಕೋತಿ ಚಿಕ್ಕ ಚಿಕ್ಕವರ ಮೇಲೆ ಬಿದ್ದು ಕಚ್ಚಿ ಗಾಯಗಳನ್ನು ಮಾಡಿದ್ದು, ಶಾಲಾ ಮಕ್ಕಳು ಮತ್ತು ಮಹಿಳೆಯರು, ವೃದ್ಧರು ಏನಾದರೂ ತಡೆಯಲೂ ಹೋದರೆ ಅವರ ಮೇಲೆಯೇ ಧಾಳಿ ಮಾಡಿ ಕಚ್ಚಿರುವ  ಘಟನೆಯೂ ಕೋಡ ನಡೆದಿದ್ದು. ಜಡಿಗೇನಹಳ್ಳಿ ಗ್ರಾಮದಲ್ಲಿ ಸುಮಾರು ಹದಿನೈದು ಜನರನ್ನು ಈ ಕೋತಿ ಕಚ್ಚಿದ್ದು ಹಲವರು ಆಸ್ಪತ್ರೆಯಲ್ಲಿ ತಲೆಗೆ ಐದಾರು ಹೋಲಿಗೆಗಳನ್ನು ಹಾಕಿಸಿಕೊಂಡಿದ್ದಾರೆ.

ಇದರಿಂದ ಗ್ರಾಮದಲ್ಲಿ ಕೋತಿಯ ಹಾವಳಿಯಿಂದ ಜನರು ಬೆಸೆತ್ತಿದ್ದು, ಭಯದ ನೆರಳಲ್ಲಿ ಒದ್ದಾಡುತ್ತಿದ್ದಾರೆ. ಕೂಲಿ ಕೆಲಸಕ್ಕೆ ಹೋದರೆ ಮನೆಯಲ್ಲಿರುವ ವಸ್ತುಗಳೆಲ್ಲ ಧ್ವಂಸ ಮಾಡಿ ಸಾರ್ವಜನಿಕರ ನಿದ್ದೆಕೆಡಿಸಿದ್ದು ಇತ್ತಿಚೇಗೆ ಸುಮಿತ್ರಮ್ಮ ಎಂಬುವರನ್ನು ತಲೆಗೆ ಕಚ್ಚಿದ್ದು, ಹೋಲಿಗೆಗೆಳನ್ನು ಹಾಕಲಾಗಿದೆ ಎಂದು ಅವರು ಹೊಸಕೋಟೆ ವಲಯ ಅರಣ್ಯಾಧಿಕಾರಿಗಳಿಗೆ ದೂರನ್ನು ನೀಡಿದ್ದರು. ಗ್ರಾಮದ ಕೋತಿಗಳನ್ನು ಹಿಡಿದು ಬೇರೆಡೆ ಬಿಡುವಂತೆ ಅಳಲನ್ನು ತೋಡಿಕೊಂಡಿದ್ದಾರೆ. ಇಲ್ಲಿಯವರೆಗೂ 15 ಜನರನ್ನು ಮಹಿಳೆಯರು ಮತ್ತು ಮಕ್ಕಳನ್ನು ಕಚ್ಚಿ ಗಾಯಗೂಳಿಸಿವೆ. ನಂತರ ಗ್ರಾಮ ಪಂಚಾಯ್ತಿಗೆ ಸಹ ಮನವಿಯನ್ನು ನೀಡಿದ್ದು, ಸಂಬಂದ ಪಟ್ಟ ಅಧಿಕಾರಿಗಳ ಜೋತೆ ಮಾತನಾಡಿ ಕೋತಿಗಳನ್ನು ಹಿಡಿಯುವ ಕೆಲಸ ಮಾಡುವುದಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಾಂತಕುಮಾರು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರೆಯಿಸಿರುವ ಹೊಸಕೋಟೆ ವಲಯರಣ್ಯಾಧಿಕಾರಿ ವರುಣ್ ಕುಮಾರ್ ಕೋತಿಗಳು ಇತ್ತಿಚೇಗೆ ಕೆಲವು ಗ್ರಾಮಗಳಲ್ಲಿ ಮನುಷ್ಯರ ಮೇಲೆ ಗಂಬೀರವಾಗಿ ದಾಳಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು  ಇದನ್ನು ಪರಿಶಿಲಿಸಿ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ ಕೋತಿಗಳ ನಿಯಂತ್ರಣಕ್ಕೆ ಕ್ರಮ ಕೈಗೂಳ್ಳುವುದಾಗಿ ತಿಳಿಸಿದ್ದಾರೆ

 

ಫ್ರೆಶ್ ನ್ಯೂಸ್

Latest Posts

Featured Videos