ಮೊಳಕೆ ಕಾಳು ತಿನ್ನೋದ್ರಿಂದ ಏನೇನು ಲಾಭ..?

ಮೊಳಕೆ ಕಾಳು ತಿನ್ನೋದ್ರಿಂದ ಏನೇನು ಲಾಭ..?

ಮೊಳಕೆ ಕಾಳುಗಳು ಯಥೇಚ್ಛವಾದ ಪ್ರೊಟಿನ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ ಸ್ವಾಭಾವಿಕ ಆಹಾರಗಳಾಗಿವೆ. ಹುರುಳಿ, ಹೆಸರುಕಾಳು, ಕಡಲೆ, ಮುಂತಾದ ಕಾಳುಗಳನ್ನು ಮೊಳೆಕೆಕಟ್ಟಿ ಸೇವಿಸಬಹುದು.

ಈ ರೀತಿ ಮೊಳೆಕೆ ಬರಿಸುವುದರಿಂದಾಗಿ ಅತ್ಯಧಿಕ ಖನಿಜಗಳು, ವಿಟಮಿನ್‍ಗಳು, ಪೋಷಕಾಂಶಗಳು ಮತ್ತು ಪ್ರೊಟೀನ್‍ಗಳು ಆಹಾರ ರೂಪದಲ್ಲಿ ನಮ್ಮ ದೇಹವನ್ನು ಸೇರುತ್ತವೆ.

ಮೊಳಕೆ ಪ್ರಕ್ರಿಯೆಯು ಅಜೀರ್ಣತೆಯನ್ನು ಹುಟ್ಟುಹಾಕುವ ಪೈಟೇಟ್ಸ್ ಎಂಬ “ಅಂಟಿ ನ್ಯೂಟ್ರಿಯೆಂಟ್‍”ಗಳನ್ನು ಕಾಳುಗಳಿಂದ ತೊಲಗಿಸುತ್ತದೆ. ಇವುಗಳು ಹಲವಾರು ಕಿಣ್ವಗಳನ್ನು ಹುಟ್ಟುಹಾಕುವ ಜೊತೆಗೆ ಸಂಕೀರ್ಣವಾದ ಪಿಷ್ಟಗಳನ್ನು ಕಡಿಮೆ ಮಾಡುತ್ತದೆ. ನೀರಿನಲ್ಲಿ ನೆನೆಹಾಕಿದರೆ ಸಾಕು ಕಾಳುಗಳಲ್ಲಿ ಮೊಳಕೆಯೊಡೆಯುತ್ತವೆ.

ಮೊಳಕೆಕಾಳುಗಳು ಅತ್ಯಂತ ಶ್ರೀಮಂತ ಆಹಾರವಾಗಿದ್ದು, ಹಣ್ಣುತರಕಾರಿಯಿಂದ ಸಿಗಬಹುದಾದ 100 ಪಟ್ಟು ಹೆಚ್ಚಿನ ಎಂಜೈಮ್‌ಗಳು ದೇಹ ಸೇರುತ್ತವೆ. ಇವು ಬೇರೆ ಆಹಾರಗಳ ವಿಟಮಿನ್ಸ್, ಮಿನರಲ್ಸ್ ಇಥರೆ ಪೋಷಕಾಂಶಗಳನ್ನು ದೇಹಕ್ಕೆ ಹೀರಿಕೊಳ್ಳಲು ಸಹಕಾರಿಯಾಗಿವೆ.

ಫೈಬರ್ ಹೆಚ್ಚಿರುವುದರಿಂದ ತೂಕ ಕಳೆದುಕೊಳ್ಳಲು ಹಾಗೂ ಮಲಬದ್ಧತೆ ನಿವಾರಣೆಗೆ ಕಾರಣವಾಗುತ್ತವೆ.  ವಿಟಮಿನ್ ಎ ಮತ್ತು ಸಿ ಅಧಿಕವಾಗಿರುವುದರಿಂದ ಕೂದಲ ಪೋಷಣೆ, ಬೆಳವಣಿಗೆಗೆ ಕಾರಣವಾಗುತ್ತವೆ. ಪ್ರತಿದಿನ ಮೊಳಕೆಕಾಳುಗಳ ಜ್ಯೂಸ್  ಸೇವಿಸುವುದರಿಂದ ವಿಟಮಿನ್ ಬಿ ಹೆಚ್ಚಾಗಿ ದೊರೆತು ಕಣ್ಣು ಮತ್ತು ಚರ್ಮವನ್ನು ಹೆಚ್ಚು ಹೊಳಪಾಗಿಡುತ್ತವೆ.

ಅಮೈನೊ ಆಮ್ಲಗಳ ಕೊರತೆಯಿಂದ ಸ್ಥೂಲ ಕಾಯದ ಸಮಸ್ಯೆ ಎದುರಾಗುತ್ತದೆ. ಅದರಲ್ಲು ನಿರಂತರವಾಗಿ ಸರಿಯಾದ ಆಹಾರ ಕ್ರಮವಿಲ್ಲದಿದ್ದರೆ ಸ್ಥೂಲ ಕಾಯ ಕಟ್ಟಿಟ್ಟ ಬುತ್ತಿ. ಮೊಳಕೆ ಕಟ್ಟಿದ ಕಾಳುಗಳಲ್ಲಿ ನಮ್ಮ ದೇಹದ ಚೈತನ್ಯವನ್ನು ಕಾಪಾಡುವಂತಹ ಅಮೈನೊ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತವೆ.

ಮೊಳಕೆ ಕಟ್ಟುವ ಪ್ರಕ್ರಿಯೆಯಿಂದ ಆ ಕಾಳು ಅಥವಾ ಧಾನ್ಯಗಳನ್ನು ಸಂಸ್ಕರಿಸುವಾಗ ಅಥವಾ ಬೆಳೆಯುವಾಗ ಸಿಂಪಡಿಸಿರುವ ಕೀಟ ನಾಶಕ ಮತ್ತು ರಾಸಾಯನಿಕಗಳನ್ನು ನಿವಾರಿಸಿಕೊಳ್ಳಬಹುದು. ಇದು ಮೊಳೆಕೆಯಿಂದ ದೊರೆಯುವ ಅತ್ಯದ್ಭುತ ಲಾಭವಾಗಿದೆ.

ಇದನ್ನು ಹೇಗೆ ಬೇಕಾದರು ಸೇವಿಸಬಹುದು. ಬೇಯಿಸಿ, ಬೇಯಿಸದೆ ಹೀಗೆ ನಾನಾ ಬಗೆಯಲ್ಲಿ ಇವುಗಳನ್ನು ಸೇವಿಸಬಹುದು. ನಿಮ್ಮ ಸ್ಥಳೀಯ ಆಹಾರ ಪದ್ಧತಿಗು ಇದು ಹೊಂದಿಕೊಳ್ಳುತ್ತದೆ. ಜೀವನಶೈಲಿಗು ಸಹ ಇದು ಹೊಂದಿಕೊಳ್ಳುತ್ತದೆ. ಜೊತೆಗೆ ಎಲ್ಲಾ ರೀತಿಯ ರುಚಿಗು ಇದು ಹೊಂದಿಕೊಳ್ಳುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos