ಕುಟುಂಬ ನೆನೆದು ಭಾವುಕರಾದ ಮೊಹಮ್ಮದ್ ಶಮಿ

ಕುಟುಂಬ ನೆನೆದು ಭಾವುಕರಾದ ಮೊಹಮ್ಮದ್ ಶಮಿ

ಬೆಂಗಳೂರು:ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ದಾಂಪತ್ಯ ಜೀವನ ಚೆನ್ನಾಗಿಲ್ಲ ಎನ್ನುವ ವಿಷಯ ಎಲ್ಲರಿಗೂ ಗೊತ್ತಿರುವುದು. ಶಮಿ ತಮ್ಮ ಮಗಳು ಮತ್ತು ಪತ್ನಿಯಿಂದ ದೂರ ಉಳಿದಿದ್ದಾರೆ, ಮಗಳಿಂದ ದೂರ ಇರುವ ಮೊಹಮ್ಮದ್ ಶಮಿ ಮಗಳು ಮತ್ತು ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಾರಂತೆ ಸಂದರ್ಶನವೊಂದರಲ್ಲಿ ಮಾತನಾಡಿದ ಶಮಿ ಮಗಳನ್ನು ನೆನೆದು ಸ್ವಲ್ಪ ಭಾವುಕರಾದರು ಎಲ್ಲರೂ ಮಕ್ಕಳು ಮತ್ತು ಕುಟುಂಬವನ್ನು ನೆನಪು ಮಾಡಿಕೊಳ್ಳುತ್ತಾರೆ ಎಂದು ಅವರು ಮಗಳನ್ನು ಭೇಟಿಯಾಗಿಲ್ಲ ಎಂದರು.

ಸದ್ಯ ಗಾಯದ ಸಮಸ್ಯೆಯಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಶಮಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸಂದರ್ಶನದಲ್ಲಿ ಕೌಟುಂಬಿಕ ವಿಷಯ ಮಾತನಾಡಿದ ಶಮಿ ಕೆಲವೊಮ್ಮೆ ಅವರೊಂದಿಗೆ ಮಾತನಾಡುತ್ತೇನೆ ಎಂದರು. ಪತ್ನಿ ಹಸಿನ್ ಅವಕಾಶ ನೀಡಿದರೆ ನಾನು ಅವಳೊಂದಿಗೆ ಮಾತನಾಡುತ್ತೇನೆ.‌

ನನ್ನ ಮತ್ತು ನನ್ನ ಮಗಳ, ತಾಯಿ ಮಧ್ಯೆ ಏನೇ ನಡೆಯುತ್ತಿರಲಿ ನನ್ನ ಮಗಳು ಆರೋಗ್ಯವಾಗಿ ಸಂತೋಷದಿಂದ ಇರುವುದು ಮುಖ್ಯ ನಾನು ಸದಾ ಇದನ್ನು ಬಯಸುತ್ತೇನೆ ಎಂದು ಮಹಮದ್ ಶಮಿ ಅವರು ಹೇಳಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos