ಮೋಹಕ ತಾರೆ ರಮ್ಯಾಗೆ ಕಂಕಣ ಭಾಗ್ಯ!

ಮೋಹಕ ತಾರೆ ರಮ್ಯಾಗೆ ಕಂಕಣ ಭಾಗ್ಯ!

ಬೆಂಗಳೂರು, ಆ.14 : ರಾಜಕಾರಣದಲ್ಲಿಯೂ ತೊಡಗಿಕೊಂಡು ಯಶಸ್ಸು ಸಾಧಿಸಿದ. ಚಿತ್ರರಂಗದಿಂದ ದೂರ ಸರಿದ ಇದೀಗ ರಾಜಕೀಯದಿಂದಲೂ ರಮ್ಯಾ ಅಂತರ ಕಾಯ್ದುಕೊಂಡಂತೆ ಕಾಣುತ್ತಿದೆ. ಅದಕ್ಕೆ ಕಾರಣ ರಮ್ಯಾ ಅವರ ಕಲ್ಯಾಣವಂತೆ…
ಹೌದು, ಮೋಹಕ ತಾರೆ ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದಾರೆ ಎನ್ನುವ ಮಾತುಗಳು ಇದೀಗ ಜೋರಾಗಿಯೇ ಕೇಳಿಬರುತ್ತಿದೆ. 2 ವರ್ಷಗಳಿಂದ ಎಲ್ಲಿಯೂ ಸದ್ದು ಮಾಡದ ರಮ್ಯಾ ಸದ್ದಿಲ್ಲದೆ ಮದುವೆ ಸಿದ್ಧತೆಯಲ್ಲಿದ್ದಾರೆ. ವರ್ಷ ಸ್ಯಾಂಡಲ್ವುಡ್ನಲ್ಲಿ ದಿಗಂತ್- ಐಂದ್ರಿತಾ ರೇ, ನಟಿ ಭಾವನಾ, ಚಿರಂಜೀವಿ ಸರ್ಜಾ- ಮೇಘನಾ ರಾಜ್, ಸುನಿಲ್ ರಾವ್, ನಿರ್ದೇಶಕರಾದ ಪವನ್ ವಡೆಯರ್, ಸಂತೋಷ್ ಆನಂದರಾಮ್ ಸೇರಿದಂತೆ ಹಲವು ತಾರೆಯರು ವಿವಾಹವಾಗಿದ್ದರು. ಇದೀಗ 37 ವರ್ಷದ ರಮ್ಯಾ ಕೂಡ ತಮ್ಮ ಬಹುಕಾಲದ ಗೆಳೆಯನೊಂದಿಗೆ ಹಸೆಮಣೆ ಏರಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಉಂಟು ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos