ಮೊಡವೆಯ ಸಮಸ್ಯೆ ನಿವಾರಣೆಗೆ ಐಸ್ ಚಿಕಿತ್ಸೆ

ಮೊಡವೆಯ ಸಮಸ್ಯೆ ನಿವಾರಣೆಗೆ ಐಸ್ ಚಿಕಿತ್ಸೆ

ಮಾ. 22, ನ್ಯೂಸ್ ಎಕ್ಸ್ ಪ್ರೆಸ್: ಮೊಡವೆ ಮುಖದ ಮೇಲೆ ಕಾಣಿಸಿಕೊಂಡರೆ ಆಗ ಇದು ಸೌಂದರ್ಯವನ್ನು ಕೆಡಿಸುವುದು ಮಾತ್ರವಲ್ಲದೆ, ನೋವು, ಕಿರಿಕಿರಿ ಉಂಟು ಮಾಡುವುದು. ಇಂತಹ ಮೊಡವೆಗಳ ನಿವಾರಣೆ ಮಾಡಲು ಹಲವಾರು ರೀತಿಯ ಕ್ರೀಮ್ ಗಳು ಹಾಗೂ ಮನೆಮದ್ದುಗಳನ್ನು ಬಳಸಿಕೊಳ್ಳಬಹುದು. ಆದರೆ ಹೆಚ್ಚಾಗಿ ಕ್ರೀಮ್ ಗಳಲ್ಲಿ ರಾಸಾಯನಿಕವು ಅಧಿಕವಾಗಿರುವುದು.

ಮೊಡವೆಗಳಿಗೆ ಐಸ್ ಬಳಸುವುದು ತುಂಬಾ ಸರಳ ಹಾಗೂ ನೇರವಾದ ಪ್ರಕ್ರಿಯೆ. ಆದರೆ ಚರ್ಮಕ್ಕೆ ಐಸ್ ಬಳಸುವ ಮೊದಲು ಕೆಲವೊಂದು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಬೇರೆ ಯಾವುದೇ ರೀತಿಯ ಮೊಡವೆ ಕ್ರೀಮ್ ಗಳನ್ನು ಬಳಸುವ ಮೊದಲು ನೀವು ಅನುಸರಿಸುವಂತಹ ಕ್ರಮಗಳನ್ನು ಅನುಸರಿಸಿಕೊಂಡು ಹೋಗಬೇಕು.

ನೀವು ನೇರವಾಗಿ ಮೊಡವೆ ಮೇಲೆ ಐಸ್ ಇಡುವ ಮೊದಲು ಅದನ್ನು ಒಂದು ಬಟ್ಟೆ ಅಥವಾ ದಪ್ಪಗಿನ ಟವೆಲ್ ನಲ್ಲಿ ಸುತ್ತಿಕೊಳ್ಳಿ. ಐಸ್ ನ್ನು ಮೊಡವೆಗಳ ಮೇಲೆ ಕೇವಲ ಒಂದು ನಿಮಿಷ ಕಾಲದ ಅಂತದಲ್ಲಿ ಮಾತ್ರ ಇಟ್ಟುಬಿಡಿ. ಬೆಳಗ್ಗೆ ಮತ್ತು ಸಂಜೆ ವೇಳೆ ಮುಖ ಶುಚಿಗೊಳಿಸಿದ ಬಳಿಕ ನೀವು ಮೊಡವೆಗಳ ಮೇಲೆ ಒಂದು ನಿಮಿಷ ಕಾಲ ಐಸ್ ನ್ನು ಇಟ್ಟುಬಿಡಿ. ಮೊಡವೆಗಳಿಂದ ಉಂಟಾಗಿರುವಂತಹ ಉರಿಯೂತವು ಅತಿಯಾಗಿದ್ದರೆ ಆಗ ನೀವು ಐದು ನಿಮಿಷ ಕಾಲ ಇಡಬಹುದು. ಇದರ ಮಧ್ಯೆ ನೀವು ಅಂತರವನ್ನು ಕಾಯ್ದುಕೊಳ್ಳಿ. ಇದರಿಂದಾಗಿ ಚರ್ಮಕ್ಕೆ ಹಾನಿಯಾಗುವುದು ತಪ್ಪುವುದು.

5-10 ನಿಮಿಷ ಕಾಲ ಬಿಸಿ ಚಿಕಿತ್ಸೆ ಕೆಲವೊಂದು ಸಲ ಬಿಸಿ ಚಿಕಿತ್ಸೆ ಜತೆಗೆ ಐಸ್ ಬಳಸಿದಾಗ ಮೊಡವೆಗಳ ಮೇಲೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದನ್ನು ನೀವು ಬಿಸಿ ಚಿಕಿತ್ಸೆಯಾಗಿರುವ ಕಂಪ್ರೆಸ್ ಅಥವಾ ಸ್ಟೀಮ್ ಟವೆಲ್ ಬಳಸಿಕೊಂಡು ಬಳಸಬಹುದು. ಬಿಸಿ ಚಿಕಿತ್ಸೆ ಮಾಡಿದರೆ ಆಗ ಚರ್ಮದಲ್ಲಿರುವ ರಂಧ್ರಗಳೂ ತೆರೆಯುವುದು. 5-10 ನಿಮಿಷ ಕಾಲ ನೀವು ಬಿಸಿ ಚಿಕಿತ್ಸೆ ನೀಡಿದ ಬಳಿಕ ಒಂದು ನಿಮಿಷ ಐಸ್ ನ್ನು ಇಟ್ಟರೆ ಆಗ ಉರಿಯೂತ ಮತ್ತು ಊತವು ಕಡಿಮೆಯಾಗುವುದು. ಮೊಡವೆಗಳು ಸಂಪೂರ್ಣವಾಗಿ ನಿವಾರಣೆ ಆಗುವ ತನಕ ನೀವು ಈ ರೀತಿಯ ಚಿಕಿತ್ಸೆಯನ್ನು ಮುಂದುವರಿಸಿಕೊಂಡು ಹೋಗಬಹುದು.

 

 

ಫ್ರೆಶ್ ನ್ಯೂಸ್

Latest Posts

Featured Videos