“ಮೋದಿಗೆ ಮದುವೆಯಾದರೂ ಮಕ್ಕಳಾಗೋಲ್ಲ” – ಬಿ. ನಾರಾಯಣರಾವ್

“ಮೋದಿಗೆ ಮದುವೆಯಾದರೂ ಮಕ್ಕಳಾಗೋಲ್ಲ” – ಬಿ. ನಾರಾಯಣರಾವ್

ಮಾ.18, ನ್ಯೂಸ್ ಎಕ್ಸ್ ಪ್ರೆಸ್ : “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮದುವೆಯಾದರೂ ಮಕ್ಕಳಾಗೋಲ್ಲ” ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಶಾಸಕ ಬಿ.ನಾರಾಯಣರಾವ್. ಬೀದರ್ ಜಿಲ್ಲೆ ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ.ನಾರಾಯಣ ರಾವ್ ಅವರು, ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ಮೋದಿ ಹೆಸರು ಉಲ್ಲೇಖಿಸಿದ ಯಕ್ಷಗಾನ ಪಾತ್ರಧಾರಿ ವಿರುದ್ಧ ಕಾಂಗ್ರೆಸ್ ಕೆಂಗಣ್ಣು ಲೋಕಸಭಾ ಚುನಾವಣೆ ಆಗಮಿಸುತ್ತಿರುವುದರಿಂದ ಪ್ರಧಾನಿಯವರನ್ನು ಟೀಕಿಸುವ ಭರದಲ್ಲಿ ಎಲ್ಲೆ ಮೀರಿ ಮಾತನಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೂ ಇರಿಸುಮುರಿಸು ಉಂಟಾಗುವಂತೆ ಮಾಡಿದರು. ‘ನರೇಂದ್ರ ಮೋದಿ ಅವರಿಗೆ ಪುರುಷತ್ವವಿಲ್ಲ. ಆದ್ದರಿಂದ ಅವರು ಮದುವೆಯಾದರೂ ಮಕ್ಕಳಾಗೋಲ್ಲ’ ಎಂದು ನಾರಾಯಣ ರಾವ್ ಹೇಳಿದರು. ಯಕ್ಷಗಾನಕ್ಕೂ ಬಂತು “ಮಗನೇ ಎಲ್ಲಿದ್ದೀಯಪ್ಪ”? ಡೈಲಾಗ್ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಇಂಥ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ ನಾರಾಯಣ ರಾವ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos