ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ಮಾಜಿ ಸಂಸದೆ ರಮ್ಯಾ ದೂರು!

ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ಮಾಜಿ ಸಂಸದೆ ರಮ್ಯಾ ದೂರು!

ನವದೆಹಲಿ, ಮಾ.29, ನ್ಯೂಸ್ ಎಕ್ಸ್ ಪ್ರೆಸ್: ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ಮತದಾರರಿಗೆ ಆಮಿಷವೊಡ್ಡುತ್ತಿದೆ ಎಂದು ಆರೋಪಿಸಿ ರಮ್ಯಾ ಆಯೋಗಕ್ಕೆ ದೂರು ನೀಡಿದ್ದು, ದೂರಿನ ಪ್ರತಿಯನ್ನು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಟ್ವೀಟರ್ ನಲ್ಲಿ, ಬಿಜೆಪಿ `ಮೈ ಫಸ್ಟ್ ವೋಟ್ ಫಾರ್ ಮೋದಿ’ ಎಂಬ ಫೇಸ್ ಬುಕ್ ಖಾತೆಯ ಮೂಲಕ ಮತದಾರರನ್ನು ಓಲೈಸುತ್ತಿದೆ. ಬ್ಯಾಡ್ಜ್, ಬ್ಯಾಗ್ಸ್ ಟೀ ಶರ್ಟ್, ಫೋನ್ ಕವರ್ಸ್ ಹಾಗೂ ಟೋಪಿಗಳನ್ನು ಉಚಿತ ಉಡುಗೊರೆಗಾಗಿ ಮೋದಿಗೆ ವೋಟ್ ಮಾಡಿ ಎಂದು ಆಮಿಷವೊಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿ ಪ್ರಚಾರಕ್ಕಾಗಿ ಫೇಸ್ ಬುಕ್ ಪೇಜ್ ಗಳನ್ನು ಹಾಗೂ ವೆಬ್ ಸೈಟ್ ಗಳ ವಿರುದ್ಧ ತಕ್ಷಣದಿಂದಲೇ ಕ್ರಮಕೈಗೊಳ್ಳಿ ಎಂದು ರಮ್ಮಾ ಅವರು ಒತ್ತಾಯಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos