ಮೋದಿ ವಿರುದ್ಧ ಸ್ಪರ್ಧೆಗಿಳಿದ ನಿವೃತ್ತ ನ್ಯಾಯಮೂರ್ತಿ ಕರ್ಣನ್

ಮೋದಿ ವಿರುದ್ಧ ಸ್ಪರ್ಧೆಗಿಳಿದ ನಿವೃತ್ತ ನ್ಯಾಯಮೂರ್ತಿ ಕರ್ಣನ್

ನವದೆಹಲಿ, . 9, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ, ಜೈಲುವಾಸ ಅನುಭವಿಸಿದ ಮೊದಲ ಹೈಕೋರ್ಟ್ ನ್ಯಾಯಾಧೀಶ ಎನ್ನುವ ಕುಖ್ಯಾತಿಗೆ ಪಾತ್ರರಾಗಿರುವ ಸಿಎಸ್ ಕರ್ಣನ್ ಅವರು ವಾರಾಣಾಸಿಯಲ್ಲಿ ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ.

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮತ್ತು ನಿವೃತ್ತ ಬಿಎಸ್ಪಿ ಕಾನ್ಸ್ಟೇಬಲ್ ತೇಜ್ ಯಾದವ್ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅಚ್ಚರಿ ಎಂದರೆ, ಕರ್ಣನ್ ಈಗಾಗಲೇ ಕೇಂದ್ರ ಚೆನ್ನೈನಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. 2ನೇ ಕ್ಷೇತ್ರವಾಗಿ ವಾರಾಣಸಿಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. 2018ರ ಮೇ ತಿಂಗಳಲ್ಲಿ ‘ಆ್ಯಂಟಿ ಕರಪ್ಶನ್ ಡೈನಾಮಿಕ್ ಪಾರ್ಟಿ’ ಹೆಸರಿನ ಪಕ್ಷವನ್ನು ಕರ್ಣನ್ ಸ್ಥಾಪಿಸಿದ್ದರು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಮೂಲಕ ಜೈಲುಶಿಕ್ಷೆ ಅನುಭವಿಸಿದ್ದರು. ನಾನು ದಲಿತ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು. ಈ ಪ್ರಕರಣ ಭಾರೀ ಚರ್ಚೆಗೂ ಕಾರಣವಾಗಿತ್ತು.  “ಒಟ್ಟು 545 ಲೋಕಸಭಾ ಕ್ಷೇತ್ರಗಳಲ್ಲೂ  ನಮ್ಮ ಪಕ್ಷದವರು ಸ್ಪರ್ಧಿಸುತ್ತಾರೆ. ಪ್ರತಿ ಕ್ಷೇತ್ರದಿಂದ ಮಹಿಳೆಯರೇ ಕಣಕ್ಕೆ ಇಳಿಯಲಿದ್ದಾರೆ,” ಎಂದು ಕರ್ಣನ್ ಈ ಮೊದಲು ಹೇಳಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos