ಮೋದಿ ‘ಮುಖವಾಡ’ ಧರಿಸಿ ಸಿಹಿ ತಯಾರಿಕೆ

ಮೋದಿ ‘ಮುಖವಾಡ’ ಧರಿಸಿ ಸಿಹಿ ತಯಾರಿಕೆ

ನವದೆಹಲಿ​, ಮೇ. 21, ನ್ಯೂಸ್ ಎಕ್ಸ್ ಪ್ರೆಸ್ : ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಎರಡು ದಿನಗಳಷ್ಟೇ ಬಾಕಿ ಇದೆ. ಬಿಜೆಪಿ ಬಹುಮತ ಪಡೆಯಲಿದೆ ಅಂತ ಎಕ್ಸಿಟ್​ ಪೋಲ್​ಗಳು ಭವಿಷ್ಯ ನುಡಿದಿರೋ ಹಿನ್ನೆಲೆ, ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಅವರು 1500-2000  ಕೆಜಿ ಸ್ವೀಟ್ಸ್​ಗೆ ಆರ್ಡರ್ ಕೊಟ್ಟಿದು, ನಮ್ಮ ಕೆಲಸಗಾರರು ಕೂಡ ಉತ್ಸಾಹದಲ್ಲಿದ್ದಾರೆ. ಹೀಗಾಗಿ ಮೋದಿ ಮಾಸ್ಕ್​​ ಧರಿಸಿ ಸಿಹಿ ತಯಾರಿಸುತ್ತಿರುವುದು ವಿಶೇಷವಾಗಿದೆ ಎಂದು ಅಂಗಡಿ ಮಾಲೀಕ ತಿಳಿಸಿದ್ದಾರೆ.

ಸಾವಿರಾರು ಕೆಜಿ ಸ್ವೀಟ್‍ ಆರ್ಡರ್

ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಗೋಪಾಲ್ ಶೆಟ್ಟಿ ವಿರುದ್ಧ ಕಾಂಗ್ರೆಸ್​ನಿಂದ ಮಾಜಿ ನಟಿ ಉರ್ಮಿಳಾ ಮಾತೋಂಡ್ಕರ್ ಸ್ಪರ್ಧಿಸಿದ್ದಾರೆ. ಫಲಿತಾಂಶ ಹೊರಬೀಳೋದಕ್ಕೂ ಮುಂಚೆಯೇ  ಸಾವಿರಾರು ಕೆಜಿ ಸ್ವೀಟ್ಸ್​ಗೆ ಆರ್ಡರ್​ ಕೊಟ್ಟಿದ್ದಾರೆ. ಬೋರಿವಾಲಿಯ ಸ್ವೀಟ್ಸ್​ ಅಂಗಡಿಯಲ್ಲಿ  ಲಾಡು, ಪೇಡ ಸೇರಿದಂತೆ ವಿವಿಧ ರೀತಿಯ ಸ್ವೀಟ್ಸ್​ ತಯಾರಿಸಲಾಗುತ್ತಿದೆ. ಇಲ್ಲಿನ ಸಿಬ್ಬಂದಿ ಮೋದಿ ಮುಖವಾಡಗಳನ್ನ ತೊಟ್ಟು ಸಿಹಿ ತಯಾರಿಕೆಯಲ್ಲಿ ತೊಡಗಿರೋದು ವಿಶೇಷವಾಗಿದೆ

ಫ್ರೆಶ್ ನ್ಯೂಸ್

Latest Posts

Featured Videos