ಮೋದಿ ಹೆಲಿಕಾಪ್ಟರ್ ಪರಿಶೀಲನೆ: ಸಸ್ಪೆಂಡ್ ಆಗಿದ್ದ ಅಧಿಕಾರಿ ಬೆಂಗಳೂರಿಗೆ ವರ್ಗ

ಮೋದಿ ಹೆಲಿಕಾಪ್ಟರ್ ಪರಿಶೀಲನೆ: ಸಸ್ಪೆಂಡ್ ಆಗಿದ್ದ ಅಧಿಕಾರಿ ಬೆಂಗಳೂರಿಗೆ ವರ್ಗ

ಬೆಂಗಳೂರು, ಏ. 22, ನ್ಯೂಸ್ ಎಕ್ಸ್ ಪ್ರೆಸ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆಂಗಾವಲು ಪಡೆಯ ಹೆಲಿಕಾಪ್ಟರ್ ನಲ್ಲಿದ್ದ ಲಗೇಜ್ ಪರಿಶೀಲನೆ ಮಾಡಿದ್ದರು ಎಂಬ ಕಾರಣಕ್ಕಾಗಿ ಮಂಗಳವಾರ(ಏ.16) ಅಮಾನತುಗೊಂಡಿದ್ದ ಒಡಿಶಾದ ಸಂಭಾಲ್ಪುರ ಚುನಾವಣಾ ವೀಕ್ಷಕ ಮೊಹಮ್ಮದ್ ಮೊಹ್ಸಿನ್ ಅವರನ್ನು ಬೆಂಗಳೂರಿಗೆ ವರ್ಗ ಮಾಡಲಾಗಿದೆ. 1996 ರ ಬ್ಯಾಚ್ ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಮೊಹಮ್ಮದ್ ಮೊಹ್ಸಿನ್ ಎಸ್ಪಿಜಿ ರಕ್ಷಕರ ಸೂಚನೆಯನ್ನು ಅನುಸರಿಸದೆ ಕರ್ತವ್ಯದ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಅಮಾನತ್ತು. ಮಾಡಲಾಗಿತ್ತು. ಆದರೆ ಮತದಾನದ ವೇಳೆ ಯಾರಿಗೂ ಕೂಡ ತಪಾಸಣೆಯಿಂದ ವಿನಾಯಿತಿ ನೀಡುವಂತಿಲ್ಲ ಎಂದು ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಪಕ್ಷ ಸರಣಿ ಟ್ವೀಟ್ ಮಾಡಿತ್ತು. ಇದರ ಬೆನ್ನಲ್ಲೇ  ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರನ್ನು ಬೆಂಗಳೂರಿನ ಚುನಾವಣಾಧಿಕಾರಿ ಕಚೇರಿಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos