ನಿರಾಸೆ ವ್ಯಕ್ತ ಪಡಿಸಿದ ಮೋದಿ

ನಿರಾಸೆ ವ್ಯಕ್ತ ಪಡಿಸಿದ  ಮೋದಿ

ನವದೆಹಲಿ, ಡಿ. 26: ವರ್ಷದ ಕೊನೆಯ ಮತ್ತು ಅತ್ಯಂತ ಅಪರೂಪದ ಕಂಕಣ ಸೂರ್ಯಗ್ರಹಣವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿ ಸೌರಮಂಡಲದ ಕೌತುಕಕ್ಕೆ ಬೆರಗಾದರು. ಬೆಳಗ್ಗೆಯೇ ತಮ್ಮ ಅಧಿಕೃತ ನಿವಾಸದ ಆವರಣದಿಂದ ಕಣ್ಣಿಗೆ ಸುರಕ್ಷಿತ ಸಾಧನ ಅಳವಡಿಸಿಕೊಂಡು ಆಗಸದತ್ತ ಸೂರ್ಯಗ್ರಹಣ ನೋಡಲು ಸಿದ್ಧರಾದರು.

ಆದರೆ, ಮೋಡ ಮುಸುಕಿದ ವಾತಾವರಣ ಕವಿಯಿತು. ಇದರಿಂದ ಅವರಿಗೆ ಸೂರ್ಯ ಅಸ್ಪಷ್ಟವಾಗಿ ಗೋಚರಿಸಿದ. ಬಳಿಕ ಮೋದಿ ಅವರು ದೇಶದ ವಿವಿಧ ಭಾಗಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದ ಕಂಕಣ ಸೂರ್ಯಗ್ರಹಣದ ಕೌತುಕ ದೃಶ್ಯವನ್ನು ಲೈವ್‍ಸ್ಟ್ರೀಮ್ ಮೂಲಕ ಕಣ್ಮುಂಬಿಕೊಂಡರು.

ಎಲ್ಲರಂತೆ ನಾನು ಕೂಡ ಸೌರ ಗ್ರಹಣದ ಕುತೂಹಲ ವೀಕ್ಷಿಸಲು ಸಿದ್ಧನಾದೆ. ಆದರೆ, ದೆಹಲಿಯಲ್ಲಿ ಮೋಡ ಕವಿದಿತ್ತು. ಹೀಗಾಗಿ ನಾನು ದೇಶದ ಇತರ ಭಾಗಗಳಲ್ಲಿ ಘಟಿಸಿದ ಸೂರ್ಯಗ್ರಹಣವನ್ನು ಲೈವ್‍ಸ್ಟ್ರೀಮ್ ಮೂಲಕ ವೀಕ್ಷಿಸಿ ಬೆರಗಾಗಿದ್ದೇನೆ ಎಂದು ಮೋದಿ ಟ್ವಿಟ್‍ನಲ್ಲಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos