ಯುವಕರ ಕನಸನ್ನ ಮೋದಿ ನಾಶ ಮಾಡಿದ್ದಾರೆ: ಸಿದ್ದು

ಯುವಕರ ಕನಸನ್ನ ಮೋದಿ ನಾಶ ಮಾಡಿದ್ದಾರೆ: ಸಿದ್ದು

ಬೆಂಗಳೂರು, ನ. 11: ಪ್ರತಿ ವರ್ಷ 2 ಕೊಟಿಯಷ್ಟು ಉದ್ಯೋಗ ಸೃಷ್ಠಿ ಮಾಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭರವಸೆಯನ್ನು ನೀಡಿದರು. ಆದರೆ ವಿಪರ್ಯಾಸವೆಂದರೆ 2 ಲಕ್ಷ ಉದ್ಯೋಗ ಸೃಷ್ಟಿಯಾಗಿಲ್ಲ. ಬದಲಾಗಿ ಉದ್ಯೋಗಗಳ ಕಡಿತದ ಪ್ರಮಾಣ ಹೆಚ್ಚಾಗುತ್ತಿದೆ. ಯುವಕರ ಕನಸುಗಳನ್ನು ಮೋದಿ ನಾಶ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ನಗರದ ಟೌನ್ಹಾಲ್ ಎದುರು ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಘಟಕಗಳು ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮೋದಿ ಪ್ರಧಾನಮಂತ್ರಿಯಾದ ಮೇಲೆ ದೇಶ ಎಂದೂ ಕಂಡಿರದ ಆರ್ಥಿಕ ದುಸ್ಥಿತಿ ಕಂಡುಬಂದಿದೆ.

ಲೋಕಸಭೆ ಚುನಾವಣೆಯಲ್ಲಿ ಮೋದಿ..ಮೋದಿ..ಎಂದು ಅಬ್ಬರ ಹಾಕಿ ಕೆಲಸ ಮಾಡಿದ ಯುವ ಸಮುದಾಯಕ್ಕೆ ಮೋದಿಯವರು ವಂಚನೆ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 5 ವರ್ಷ ಆಡಳಿತ ಪೂರ್ಣಗೊಳಿಸಿ ಆರನೇ ವರ್ಷದತ್ತ ಕಾಲಿಟ್ಟ ಮೋದಿಯವರು ದೇಶವನ್ನು ಅಧೋಗತಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಮನ್ಮೋಹನ್ಸಿಂಗ್ ಪ್ರಧಾನಿಯಾಗಿದ್ದಾಗ ಆರ್ಥಿಕ ಬೆಳವಣಿಗೆ ಶೇ.8 ರಿಂದ 9ರ ದರದಲ್ಲಿತ್ತು. ಆರು ವರ್ಷದಲ್ಲಿ ಅದು ಕುಸಿದು ಹೋಗಿದ್ದು, ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರವೇ ಅದು ಶೇ.5 ರಷ್ಟಿದೆ. ಈವರೆಗೂ ಕಪ್ಪು ಹಣವೂ ವಾಪಸ್ ಬಂದಿಲ್ಲ, ಭ್ರಷ್ಟಾಚಾರವೂ ಕಡಿಮೆಯಾಗಿಲ್ಲ. ನೋಟ್ ಬ್ಯಾನ್ ಸಂದರ್ಭದಲ್ಲಿ ಸತ್ತವರು ಬಡವರೇ ಹೊರತು, ಶ್ರೀಮಂತರಲ್ಲ ಎಂದು ಗರಂ ಆದ್ರು.

ಕರ್ನಾಟಕದ ಮಟ್ಟಿಗಂತೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನೆರೆ ಪೀಡಿತರಿಗೆ ನೆರವು ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅನ್ನಭಾಗ್ಯ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದರು. ಬಿಜೆಪಿ ಜನಪರ ಕೆಲಸ ಮಾಡುವುದಿಲ್ಲ, ರಾಮಜನ್ಮಭೂಮಿ, ಪುಲ್ವಾಮಾ ಅಂತಹ ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಜನರ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿಲ್ಲ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಟೀಕಿಸಿದರು.

ಇನ್ನು ಪ್ರತಿಭಟನೆಯಲ್ಲಿ ಮಾಜಿ ಸಚಿವ ರಾಮಲಿಂಗರೆಡ್ಡಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿ.ಕೆ ಹರಿಪ್ರಸಾದ್, ಉಮಾಶ್ರೀ, ಮೋಟಮ್ಮ, ಜಯಮಾಲಾ, ಮತ್ತಿತ್ತರ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos