ಮೋದಿಯಿಂದ ಇಮ್ರಾನ್ ಖಾನ್ ಗೆ ಪಾಕ್ ರಾಷ್ಟ್ರೀಯ ದಿನದ ಶುಭಾಶಯ!

ಮೋದಿಯಿಂದ ಇಮ್ರಾನ್ ಖಾನ್ ಗೆ ಪಾಕ್ ರಾಷ್ಟ್ರೀಯ ದಿನದ ಶುಭಾಶಯ!

ಮಾ, 23, ನ್ಯೂಸ್ ಎಕ್ಸ್ ಪ್ರೆಸ್: “ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಸಂದೇಶ ಕಳಿಸಿದ್ದಾರೆ. ಅದರ ಒಕ್ಕಣೆ ಹೀಗಿದೆ: ‘ಪಾಕಿಸ್ತಾನ ರಾಷ್ಟ್ರೀಯ ದಿನದಂದು ಪಾಕಿಸ್ತಾನದ ಜನತೆಗೆ ನನ್ನ ಶುಭಾಶಯಗಳು. ಉಪಖಂಡದ ಜನರು ಪ್ರಜಾಪ್ರಭುತ್ವ, ಶಾಂತಿಯುತ, ಪ್ರಗತಿಶೀಲ ಮತ್ತು ಸಮೃದ್ಧಿಯ ಆಶಯಗಳಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ. ಭಯೋತ್ಪಾದನೆ ಮತ್ತು ಹಿಂಸೆಯಿಂದ ಮುಕ್ತವಾಗಿ ಬದುಕಬೇಕಿದೆ'” ಎಂದು ಮೋದಿಯವರ ಸಂದೇಶದ ಸಾರಾಂಶವನ್ನು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಕೆಲವು ವಾರಗಳಿಂದ ಎದ್ದಿದ್ದ ಪ್ರಕ್ಷುಬ್ಧ ವಾತಾವರಣದ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸಂದೇಶ ಕಳಿಸಿದ್ದಾರೆ. ಪಾಕಿಸ್ತಾನ ಮಾರ್ಚ್ 23 ರಂದು ಪಾಕಿಸ್ತಾನ ದಿನವನ್ನು ಆಚರಿಸಿಕೊಳ್ಳುತ್ತಿದ್ದು ಅದಕ್ಕಾಗಿ ಖಾನ್ ಅವರಿಗೆ ಮೋದಿ ಶುಭಾಶಯ ಕೋರಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos