ಅಂತರೀಕ್ಷದಲ್ಲಿ ಭಾರತದ ಸಾಧನೆ; ಶಕ್ತಿ ಮಿಷನ್ ಯಶಸ್ವಿ​

ಅಂತರೀಕ್ಷದಲ್ಲಿ ಭಾರತದ ಸಾಧನೆ; ಶಕ್ತಿ ಮಿಷನ್ ಯಶಸ್ವಿ​

ನವದೆಹಲಿ, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಅಂತರೀಕ್ಷದಲ್ಲಿ ಭಾರತ ಇಂದು ಮಹತ್ಸಾಧನೆ ಮಾಡಿದ್ದು, ಇದೇ ಮೊದಲ ಬಾರಿಗೆ ಲೋ ಆರ್ಬಿಟ್​ ಲೈವ್​ ಸ್ಯಾಟಲೈಟ್​​ ಹೊಡೆದುಹಾಕಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ಇಲ್ಲಿಯವರೆಗೆ ಜಗತ್ತಿನ ಮೂರು ದೇಶಗಳ ಬಳಿ ಮಾತ್ರ ಇದ್ದ ಈ ಸಾಮರ್ಥ್ಯವನ್ನ ಇದೀಗ ಭಾರತವೂ ಸಾಧಿಸಿದೆ. ಈ ಮೊದಲು ಅಮೇರಿಕಾ, ಚೀನಾ ಹಾಗೂ ರಷ್ಯಾ ಬಳಿ ಮಾತ್ರವೇ ಈ ಸಾಮರ್ಥ್ಯವಿತ್ತು. ಭಾರತ ಕೂಡ ಲೋ ಆರ್ಬಿಟ್‌ ​ಸ್ಯಾಟಲೈಟ್‌ಗಳನ್ನ ಅಂತರೀಕ್ಷದಲ್ಲೇ ಹೊಡೆದುರುಳಿಸುವ ಕ್ಷಿಪಣಿ ಬಗ್ಗೆ ಹಲವು ವರ್ಷಗಳಿಂದ ಪರೀಕ್ಷೆ ನಡೆಸ್ತಾ ಇತ್ತು. ಇದಕ್ಕಾಗಿಯೇ ಶಕ್ತಿ ಮಿಷನ್‌ ಅನ್ನೋ ಯೋಜನೆ ಕೈಗೊಂಡಿತ್ತು. ಇದೀಗ ಮಿಷನ್ ಸಕ್ಸಸ್ ಆಗಿದೆ. ಶಕ್ತಿ ಮಿಷನ್‌ ಒಂದು ಶತ್ರು ರಾಷ್ಟ್ರಗಳ ಸ್ಯಾಟಲೈಟ್‌ ಪ್ರತಿರೋಧಕ ತಂತ್ರಜ್ಞಾನವಾಗಿದ್ದು, ಈ ಕ್ಷಿಪಣಿಗಳು ಶತ್ರು ರಾಷ್ಟ್ರದ ಉಪಗ್ರಹಗಳನ್ನ ಅಂತರೀಕ್ಷದಲ್ಲೇ ಹೊಡೆದು ಹಾಕಬಲ್ಲವು. ಇವತ್ತು ನಡೆದ ಆಪರೇಷನ್‌ನಲ್ಲಿ ಮೂರೇ ನಿಮಿಷದಲ್ಲಿ ಶಕ್ತಿ ಮಿಷನ್‌​​ ಯಶಸ್ವಿಯಾಗಿದೆ.

ಇದರಿಂದ ದೇಶದ ಗೌರವ ಹೆಚ್ಚಾಗಿದೆ. ಆದ್ರೆ ನಾವು ಈ ತಂತ್ರಜ್ಞಾನವನ್ನ ದೇಶದ ಭದ್ರತೆಗಾಗಿ ಬಳಸುತ್ತೇವೆಯೇ ಹೊರತು ಬೇರಾವುದೇ ದೇಶಗಳ ವಿರುದ್ಧ ಬಳಸೋದಕ್ಕಲ್ಲ ಅಂತಾ ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos