ಮೋದಿ ಬಗ್ಗೆ ಹಾಸ್ಯಚಿತ್ರ ನಿರ್ಮಿಸಬೇಕಿತ್ತು: ಊರ್ಮಿಳಾ

ಮೋದಿ ಬಗ್ಗೆ ಹಾಸ್ಯಚಿತ್ರ ನಿರ್ಮಿಸಬೇಕಿತ್ತು: ಊರ್ಮಿಳಾ

ನವದೆಹಲಿ, ಏ. 19, ನ್ಯೂಸ್ ಎಕ್ಸ್ ಪ್ರೆಸ್: ಖ್ಯಾತ ನಟಿ ಹಾಗೂ ಮುಂಬೈ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್  ರವರು, 5 ವರ್ಷ ಕಾಲ ದೇಶದ ಪ್ರಧಾನಿಯಾಗಿ ಸಮಾಜಕ್ಕೆ ಕೊಡುಗೆ ನೀಡದ ನರೇಂದ್ರ ಮೋದಿ ಬಯೋಪಿಕ್ ಗೆ ಅರ್ಹ ವ್ಯಕ್ತಿಯಲ್ಲ; ಅವರ ಬಗ್ಗೆ ಹಾಸ್ಯಚಿತ್ರ ನಿರ್ಮಿಸಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಅವರ ಜೀವನದ ಘಟನೆಗಳನ್ನು ಆಧರಿಸಿದ ಚಲನಚಿತ್ರ ನಿರ್ಮಿಸಲಾಗಿದೆ. ಆದರೆ ಪ್ರಧಾನಿಯಾಗಿ ಅವರ ಜೀವನ ದೊಡ್ಡ ತಮಾಷೆ. 56 ಇಂಚಿನ ಎದೆ ಹೊಂದಿರುವುದಾಗಿ ಹೇಳಿಕೊಂಡ ಅವರು ಯಾವ ಸಾಧನೆಯನ್ನೂ ಮಾಡಲಿಲ್ಲ.

ಅವರ ಬಗೆಗಿನ ಚಿತ್ರ ಭಾರತದ ಪ್ರಜಾಪ್ರಭುತ್ವ, ಬಡತನ ಹಾಗೂ ವೈವಿಧ್ಯತೆಯ ಅಣಕ. ಇವೆಲ್ಲಕ್ಕೂ ಅವರು ಧಕ್ಕೆ ತಂದಿದ್ದಾರೆ” ಎಂದು ಮಾಂತೋಡ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ವಿವೇಕ್ ಒಬೆರಾಯ್ ಅಭಿನಯದ “ಪಿಎಂ ನರೇಂದ್ರ ಮೋದಿ” ಚಿತ್ರವನ್ನು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಬಿಡುಗಡೆ ಮಾಡದಂತೆ ಚುನಾವಣಾ ಆಯೋಗ ಆದೇಶಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos