ರಾಜಕಾರಣ ಬದಲು ಮೋದಿ ಬಾಲಿವುಡ್ ಸೇರಬೇಕಿತ್ತು: ಗೆಹ್ಲೋಟ್ ವ್ಯಂಗ್ಯ

ರಾಜಕಾರಣ ಬದಲು ಮೋದಿ ಬಾಲಿವುಡ್ ಸೇರಬೇಕಿತ್ತು: ಗೆಹ್ಲೋಟ್ ವ್ಯಂಗ್ಯ

ಜೈಪುರ,  ಮಾ.27, ನ್ಯೂಸ್ ಎಕ್ಸ್ ಪ್ರೆಸ್: ಪ್ರಧಾನಿ ನರೇಂದ್ರ ಮೋದಿ ಅವರು ನಟನೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಅವರು ರಾಜಕೀಯವಲ್ಲ ಬಾಲಿವುಡ್ ಸೇರಬಹುದಿತ್ತು ಎಂದು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಟೀಕಿಸಿದ್ದಾರೆ.

ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಗೆಹ್ಲೋಟ್, “ಜುಂಬ್ಲೆಬಾಜಿ (ವಾಕ್ಚಾತುರ್ಯ), ಡ್ರಾಮಾಬಾಜಿ (ನಟನೆ) ಮೋದಿ ಅವರ ಸ್ವಭಾವದಲ್ಲಿಯೇ ಇದೆ. ಅವರು ಬಾಲಿವುಡ್ ಸೇರಿ ಒಳ್ಳೆಯ ನಟರಾಗಬಹುದಿತ್ತು” ಎಂದು ಟಾಂಗ್ ಕೊಟ್ಟಿದ್ದಾರೆ.

ನಟನೆಯಲ್ಲಿ ಸತ್ಯ, ವಾಸ್ತವವಿರುವುದಿಲ್ಲ. ಹಾಗೆಯೇ ಮೋದಿ ಅವರು ಸತ್ಯವನ್ನು ಹೇಳುವುದನ್ನು ಬಿಟ್ಟು, ಸುಳ್ಳಿನ ಆಸರೆಯಲ್ಲಿ ನಟಿಸುತ್ತಾರೆ. ನಟನೆ ದೇಶಕ್ಕೇನೂ ಒಳ್ಳೆಯದನ್ನು ಮಾಡಿಲ್ಲ. ಬರೀ ನಟನೆಯಿಂದ ಅಭಿವೃದ್ಧಿಯೂ ಆಗಲ್ಲ, ಯಾರ ಹಸಿವು ಕೂಡ ನೀಗಲ್ಲ ಎಂದು ಕಿಡಿಕಾರಿದರು.

ಫ್ರೆಶ್ ನ್ಯೂಸ್

Latest Posts

Featured Videos