“12 ಜನರ ಕೈಯಲ್ಲಿದೆ ಕರ್ನಾಟಕ ಸರ್ಕಾರದ ರಿಮೋಟ್!” ಮೋದಿ

“12 ಜನರ ಕೈಯಲ್ಲಿದೆ ಕರ್ನಾಟಕ ಸರ್ಕಾರದ ರಿಮೋಟ್!” ಮೋದಿ

ಚಿತ್ರದುರ್ಗ, ಏ. 9, ನ್ಯೂಸ್ ಎಕ್ಸ್ ಪ್ರೆಸ್: ಕರ್ನಾಟಕ ಸರ್ಕಾರದ ರಿಮೋಟ್ ದೆಹಲಿಯ 12 ಜನರ ಕೈಯಲ್ಲಿದೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ವಿಧಾನಸಭಾ ಚುನಾವಣೆಯಲ್ಲಿ ಪ್ರಯತ್ನ ಮಾಡಿದರು. ಇಲ್ಲಿಯ ನಾಯಕರಿಗೆ ದೇಶದ ಚಿಂತೆ ಇಲ್ಲ ಮತ್ತು ಸಂವಿಧಾನದ ಬಗ್ಗೆ ಗೌರವ ಸಹ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಒನಕೆ ಒಬ್ಬವ್ವ ಮತ್ತು ವೀರ ಮದಕರಿ ನಾಯಕ ಅವರು ವಿರೋಧಿಗಳನ್ನು ಹೊಡೆದುರಳಿಸಿದ್ದರು. ಇಂದು ನೀವೆಲ್ಲರೂ ಈ ಚೌಕಿದಾರನೊಂದಿಗೆ ನಿಲ್ಲಬೇಕು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಮಂತ್ರವಾಗಿದೆ. ಇದೇ ಮಂತ್ರದಂತೆ ನಾವು ಕೆಲಸ ಮಾಡುತ್ತಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದ ಎಲ್ಲ ರೈತರಿಗೆ ವಿಸ್ತರಿಸುತ್ತೇವೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಗುತ್ತಾ ಬಂದರೂ ಇದೂವರೆಗೂ ಯಾವ ರೈತರ ಸಾಲಮನ್ನಾ ಮಾಡಿಲ್ಲ. ಬದಲಾಗಿ ರೈತರ ಮನೆಗಳಿಗೆ ಬ್ಯಾಂಕ್ ಗಳಿಂದ ನೋಟಿಸ್ ಬರುತ್ತಿದೆ ಎಂದು ದೂರಿದರು. ದಾವಣಗೆರೆಯನ್ನು ಸ್ಮಾರ್ಟ್ ಸಿಟಿ ಮಾಡಲು, ಉದ್ಯೋಗ ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್ ನಾಲ್ಕು ತಲೆಮಾರಿನಿಂದ ತನ್ನ ಆಡಳಿತಾವಧಿಯಲ್ಲಿ ದೇಶದ ಜನತೆಗೆ ಮೋಸ ಮಾಡಿಕೊಂಡು ಬರುತ್ತಿದೆ. ದೆಹಲಿಯ ಸಿಖ್ ಧಂಗೆ, ಕಾಮನ್‍ವೆಲ್ತ್, 2ಜಿ, ನ್ಯಾಷನಲ್ ಹೆರಾಲ್ಡ್, ಹೆಲಿಕಾಪ್ಟರ್ ಹಗರಣ ಮಾಡಿದವರಿಗೆ ಕೆಲವೇ ದಿನಗಳಲ್ಲಿ ಶಿಕ್ಷೆ ಸಿಗಲಿದೆ. 20ನೇ ಶತಮಾನದ ಶಿಕ್ಷೆಗೆ 21ನೇ ಶತಮಾನದ ಯುವ ಜನತೆ ತಮ್ಮ ವೋಟ್ ಮೂಲಕ ಶಿಕ್ಷೆ ನೀಡಲಿದ್ದಾರೆ. ಪ್ರಥಮ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಜನತೆ ದೇಶವನ್ನು ಭದ್ರ ಮಾಡಲು, ಹುತಾತ್ಮರಾದ ಯೋಧರು, ಬಡವರಿಗೆ ಸಮರ್ಪಣೆ ಮಾಡಬೇಕು. ಇವಿಎಂನಲ್ಲಿ ಕಮಲಕ್ಕೆ ನೀವು ಹಾಕುವ ಮತ ನನ್ನ ಖಾತೆಗೆ ಬಂದು ಬೀಳಲಿದೆ. ನಿಮ್ಮ ಹೆಚ್ಚು ಮತಗಳು ನನ್ನನ್ನು ಮತ್ತಷ್ಟು ಬಲಿಷ್ಠ ಮಾಡಲಿವೆ ಎಂದು ಮೋದಿ ಹೇಳಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಆರಂಭದಲ್ಲಿ ಕರ್ನಾಟಕದ ಜನತೆಗೆ ಯುಗಾದಿ ಹಬ್ಬದ ಶುಭಾಶಯವನ್ನ ಕನ್ನಡದಲ್ಲಿಯೇ ತಿಳಿಸಿ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಇದೇ ವೇಳೆ ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ನಮನ ಸಲ್ಲಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos