‘ಮೋದಿಯಂತಹ ನಾಯಕ ಸಿಕ್ಕಿದು ಅದೃಷ್ಟ’: ಟ್ರಂಪ್

‘ಮೋದಿಯಂತಹ ನಾಯಕ ಸಿಕ್ಕಿದು ಅದೃಷ್ಟ’: ಟ್ರಂಪ್

ನವದೆಹಲಿ, ಮೇ. 25, ನ್ಯೂಸ್ಎಕ್ಸ್ ಪ್ರೆಸ್‍: ನರೇಂದ್ರ ಮೋದಿ ಅವರಂತಹ ನಾಯಕನನ್ನು ಪಡೆದಿರುವುದು ಭಾರತೀಯರ ಅದೃಷ್ಟ ಅಂತಾ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಕೊಂಡಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ  ಬಿಜೆಪಿ ಸ್ಪಷ್ಟ ಬಹುತದೊಂದಿಗೆ ಗೆಲುವು ಸಾಧಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಮೊನ್ನೆಯಷ್ಟೇ ಡೋನಾಲ್ಡ್ ಟ್ರಂಪ್ ಟ್ವೀಟ್ ಮಾಡಿ ವಿಶ್ ಮಾಡಿದ್ದರು.

ಮೋದಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿರೋದು ನಮ್ಮ ಮತ್ತು ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಅಭಿವೃದ್ದಿಯಾಗಲು ನೆರವಾಗಲಿದೆ. ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ದಿನಗಳಲ್ಲಿ  ಒಟ್ಟಿಗೆ ಮಹತ್ವದ ಯೋಜನೆಗಳನ್ನು ಮಾಡುವುದನ್ನು ನಾನು ನಿರೀಕ್ಷಿಸುತ್ತಿದ್ದೇನೆ ಅಂತಾ ಟ್ವೀಟ್ ಮಾಡಿ ಮೋದಿಗೆ ಶುಭಾಶಯ ಕೋರಿದ್ದರು. ಮೋದಿಯವರ ದೊಡ್ಡ ರಾಜಕೀಯ ಗೆಲುವಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರೊಬ್ಬ ಅತ್ಯಂತ ಶ್ರೇಷ್ಠ ನಾಯಕ, ಇಂತಹ ನಾಯಕನನ್ನು ಪಡೆಯಲು ಭಾರತದ ಜನತೆ ಅದೃಷ್ಟ ಮಾಡಿದ್ದಾರೆ ಅಂತಾ ಟ್ವೀಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos