ಹೆಚ್ಚು ಮೊಬೈಲ್ ಬಳಸುವವರು ಈ ಸುದ್ದಿಯನ್ನು ಮಿಸ್ ಮಾಡಬೇಡಿ!

ಹೆಚ್ಚು ಮೊಬೈಲ್ ಬಳಸುವವರು ಈ ಸುದ್ದಿಯನ್ನು ಮಿಸ್ ಮಾಡಬೇಡಿ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಮೊಬೈಲ್ಗಳಿಗೆ ಅಡಿಕ್ಟ್ ಆಗಿರುತ್ತಾರೆ. ಇದರಿಂದ ಅವರಿಗೆ ಹೊರಗಿನ ಪ್ರಪಂಚದ ಜ್ಞಾನ ಸ್ವಲ್ಪವೂ ಇರುವುದಿಲ್ಲ. ಆದರಿಂದ ನಾವು ದಿನನಿತ್ಯ ಮೊಬೈಲ್ ಹೆಚ್ಚಾಗಿ ಬಳಸುವುದರಿಂದ ನಮಗೆ ಏನೆಲ್ಲಾ ತೊಂದರೆಗಳಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.
ಮೊಬೈಲ್ ಬಳಕೆಯಿಂದ ಉಂಟಾಗುವ ಸಮಸ್ಯೆಗಳಲ್ಲಿ ಟ್ರಿಗರ್ ಫಿಂಗರ್ ಸಮಸ್ಯೆ ಕೂಡ ಒಂದು. ಮೊಬೈಲ್ ಹಾಗೂ ಇನ್ನಿತರ ಟಚ್ ಸ್ಕ್ರೀನ್ ಬಳಕೆ ಮಾಡುವಾಗ ನಮ್ಮ ಬೆರಳುಗಳನ್ನು ಬಳಸುತ್ತೇವೆ. ಇದರಿಂದ ಬೆರಳುಗಳಲ್ಲಿ ನೋವು ಹಾಗೂ ಕೈಗಳ ನೋವು ಮುಂತಾದವು ಎದುರಾಗುತ್ತವೆ. ಮೊಬೈಲ್ ಬಳಕೆಯಿಂದ ಉಂಟಾಗುವ ಇಂತಹ ಕೈ ಅಥವಾ ಸ್ನಾಯುಗಳ ನೋವಿಗೆ ಟ್ರಿಗರ್ ಫಿಂಗರ್ ಎನ್ನುತ್ತಾರೆ.
ಟ್ರಿಗರ್ ಫಿಂಗರ್ ಸಮಸ್ಯೆ ಇರುವವರಿಗೆ ಬೆರಳುಗಳಲ್ಲಿ ನೋವು, ಊತ ಮತ್ತು ಬಿಗಿತಗಳು ಉಂಟಾಗುತ್ತವೆ. ಬೆಳಗಿನ ಸಮಯದಲ್ಲಿ ಬೆರಳುಗಳು ಗಟ್ಟಿಯಾಗಿರುತ್ತವೆ ಮತ್ತು ಬೆರಳಿನ ಚಲನೆಯ ಸಮಯದಲ್ಲಿ ಬೆರಳುಗಳಿಂದ ಶಬ್ದ ಕೂಡ ಬರುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರ ಬೆರಳಿನ ಕೆಳಗೆ ಅಂಗೈಯಲ್ಲಿ ನೋವು ಅಥವಾ ಗಂಟುಗಳನ್ನು ಕಾಣಬಹುದು. ಪ್ರಪಂಚದಾದ್ಯಂತ ಇಂದು ಪ್ರತಿಶತ 2 ರಷ್ಟು ಮಂದಿ ಟ್ರಿಗರ್ ಫಿಂಗರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಟ್ರಿಗರ್ ಫಿಂಗರ್ ಸಮಸ್ಯೆಯಿಂದ ದೂರವಿರಲು ನಿಮ್ಮ ಬೆರಳುಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅವಶ್ಯವಾಗಿದೆ. ಟ್ರಿಗರ್ ಫಿಂಗರ್ ಸಮಸ್ಯೆಯಿಂದ ಬಳಲುತ್ತಿರುವವವರು ನಿಮ್ಮ ಬೆರಳಿಗೆ ಹೆಚ್ಚು ಆರಾಮ ನೀಡಬೇಕು ಮತ್ತು ಮೊಬೈಲ್ ಬಳಕೆಯನ್ನು ಕಡಿಮೆಮಾಡಬೇಕು ಹಾಗೂ ಬೆರಳುಗಳ ಮೇಲೆ ಹೆಚ್ಚು ಒತ್ತಡ ಹಾಕಬಾರದು. ಮೃದುವಾಗಿ ಬೆರಳುಗಳನ್ನು ಮಸಾಜ್ ಮಾಡಿಕೊಳ್ಳಬೇಕು ಮತ್ತು ವಾರದಲ್ಲಿ 2-3 ಬಾರಿ ಬಿಸಿ ನೀರಿನಲ್ಲಿ ನಿಮ್ಮ ಕೈಗಳನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಬೆರಳುಗಳಲ್ಲಿರುವ ಸಣ್ಣ ಪುಟ್ಟ ನೋವು ಕಡಿಮೆಯಾಗುತ್ತದೆ.
ಟ್ರಿಗರ್ ಫಿಂಗರ್ ಆರಂಭದ ಹಂತದಲ್ಲಿದ್ದಾಗ ಮಾತ್ರ ಇಂತಹ ಕೆಲವು ಸರಳ ಉಪಾಯಗಳನ್ನು ಮಾಡಿಕೊಳ್ಳಬಹುದು. ಆದರೆ ವಿಪರೀತ ಮೊಬೈಲ್ ಬಳಸಿ ಬೆರಳುಗಳಲ್ಲಿ ಹೆಚ್ಚು ನೋವು ಕಂಡುಬಂದಾಗ ಅಥವಾ ಊತ, ಗಂಟುಗಳು ಕಂಡುಬಂದಾಗ ಮಸಾಜ್ ಮುಂತಾದವುಗಳಿಂದ ಟ್ರಿಗರ್ ಫಿಂಗರ್ ಅಥವಾ ಬೆರಳುಗಳ ನೋವು ಕಡಿಮೆಯಾಗುವುದಿಲ್ಲ. ಅಂತಹ ಸಮಯದಲ್ಲಿ ನೀವು ಮೊದಲು ವೈದ್ಯರನ್ನು ಪರೀಕ್ಷಿಸಬೇಕು. ವೈದ್ಯರು ಟ್ರಿಗರ ಫಿಂಗರ್ ಗೆ ಒಳಗಾದ ಸ್ನಾಯುಗಳಿಗೆ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos