ದ.ಕ.ಕ್ಕೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ: ಐವನ್ ಡಿಸೋಜ ಹೇಳಿಕೆ

ದ.ಕ.ಕ್ಕೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ: ಐವನ್ ಡಿಸೋಜ ಹೇಳಿಕೆ

ಮಂಗಳೂರು, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯನ್ನು ಪ್ರಮುಖವಾಗಿಸಿಕೊಂಡು ಜೆಡಿಎಸ್ ಸಹಕಾರದೊಂದಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ರೈಲ್ವೆ ವಲಯ ರಚನೆ, ಬಂದರು ಅಭಿವೃದ್ಧಿ, ವಿಮಾನ ನಿಲ್ದಾಣದ ಖಾಸಗೀಕರಣ ಹಿಂಪಡೆದು ಅಭಿವೃದ್ಧಿ, ಐಐಟಿ ಸ್ಥಾಪನೆ, ವಿಜಯ ಬ್ಯಾಂಕ್ ಹೆಸರು ಉಳಿಕೆ ಸೇರಿದಂತೆ ಹಲವಾರು ಯೋಜನೆ ರೂಪಿಸಿ, ಕಾಂಗ್ರೆಸ್ ಗೆದ್ದರೆ ಶೀಘ್ರ ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.

ಅಭ್ಯರ್ಥಿಯಾಗಿ ಮಿಥುನ್ ರೈ ನಿಂತ ಬಳಿಕ ಹೊಸ ಅಲೆ ಸೃಷ್ಟಿಯಾಗಿದೆ. ಇದನ್ನು ಕೊನೆ ತನಕ ಕೊಂಡೊಯ್ದು ಮತಗಳನ್ನಾಗಿ ಪರಿವರ್ತಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಸಂಸದ ನಳಿನ್ ಕುಮಾರ್ ಕಟೀಲು ನಿಷ್ಕ್ರಿಯರಾಗಿದ್ದರೂ ಚೌಕಿದಾರ್ ಪೇಟ ಹಾಕಿ ಸುತ್ತುತ್ತಿದ್ದಾರೆ. ಕ್ಷೇತ್ರದಲ್ಲಿ 10 ವರ್ಷ ಸಂಸದರೇ ಇಲ್ಲದ ಪರಿಸ್ಥಿತಿ ಇತ್ತು. ಮಿಥುನ್ ಅವರನ್ನು ಗೆಲ್ಲಿಸಿ, ಖಾಲಿ ಸ್ಥಾನ ತುಂಬಿಸುವ ಕೆಲಸ ಮಾಡಲಾಗುವುದು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos