ಶಾಸಕ ಡಾ ಕೆ. ಸುಧಾಕರ್ ವ್ಯಂಗ್ಯ

ಶಾಸಕ ಡಾ ಕೆ. ಸುಧಾಕರ್ ವ್ಯಂಗ್ಯ

ಚಿಕ್ಕಬಳ್ಳಾಪುರ, ಅ.1 : ಮೈತ್ರಿ ಸರಕಾರದಲ್ಲಿ ಗಂಡ ಹೆಂಡತಿನ ನಂಬಲಿಲ್ಲ, ಹೆಂಡತಿ ಗಂಡನನ್ನು ನಂಬಲಿಲ್ಲ. ಕೊನೆಯವರೆಗೂ ಇದೇ ರೀತಿ ಸಮ್ಮಿಶ್ರ ಸರಕಾರ ನಡೆಸಿದರು ಎಂದು ಡಾ.ಕೆ.ಸುಧಾಕರ್ ಟೀಕಿಸಿದರು. ಮಂಚೇನಹಳ್ಳಿಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಎರಡೂ ಪಕ್ಷದವರು ನಿಜವಾಗಿ ಗಂಡ ಹೆಂಡತಿ ಅಲ್ಲದಿದ್ದರೂ ಹೊರಗಡೆ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುತ್ತಿದ್ದರು. ಆದರೆ ಕೊಠಡಿಯ ಒಳ ಹೋದ ಮೇಲೆ ಬೈದು ಕೊಳ್ಳುತ್ತಿದ್ದರು ಎಂದು ಸಮ್ಮಿಶ್ರ ಸರಕಾರದ ನಡೆ ಬಗ್ಗೆ ವ್ಯಂಗ್ಯವಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos