ಶಾಸಕ ಶ್ರೀಮಂತ್ ಆಸ್ಪತ್ರೆಯಲ್ಲಿ ಪತ್ತೆ!

ಶಾಸಕ ಶ್ರೀಮಂತ್ ಆಸ್ಪತ್ರೆಯಲ್ಲಿ ಪತ್ತೆ!

ಮುಂಬೈ, ಜು.18 : ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಧಾನಸಭೆ ಕಲಾಪಕ್ಕೆ 22 ಶಾಸಕರು ಗೈರಾಗಿದ್ದಾರೆ. ಕೆಲ ಅತೃಪ್ತ ಶಾಸಕರು ಮುಂಬೈನಲ್ಲಿ ತಂಗಿದ್ದಾರೆ. ಈ ಮಧ್ಯೆ ರಾತ್ರೋರಾತ್ರಿ ನಾಪತ್ತೆಯಾಗಿದ್ದ ಶಾಸಕ ಶ್ರೀಮಂತ್ ಪಾಟೀಲ್ ಈಗ ಮುಂಬೈ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದಾರೆ.
ಶ್ರೀಮಂತ್ ಪಾಟೀಲ್ ಆಸ್ಪತ್ರೆಯಲ್ಲಿರುವ ಫೋಟೋ ಒಂದು ವೈರಲ್ ಆಗಿದೆ. ಶ್ರೀಮಂತ್ ಪಾಟೀಲ್ ರಿಗೆ ಎದೆನೋವು ಕಾಣಿಸಿಕೊಂಡಿತ್ತು. ಹಾಗಾಗಿ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿ ಬರ್ತಿದೆ.
ಶ್ರೀಮಂತ್ ಪಾಟೀಲ್ ಕಾಂಗ್ರೆಸ್ ಶಾಸಕರ ಜೊತೆ ಬೆಂಗಳೂರಿನ ಪ್ರಕೃತಿ ಹೊಟೇಲ್ ನಲ್ಲಿದ್ದರು. ಆದ್ರೆ ರಾತ್ರೆಯಿಂದ ನಾಪತ್ತೆಯಾಗಿದ್ದರು. ಅವ್ರ ಬಗ್ಗೆ ಕಾಂಗ್ರೆಸ್ ದೂರು ನೀಡಿತ್ತು. ಶಾಸಕರೊಬ್ಬರು ನಾಪತ್ತೆಯಾಗಿದ್ದಾರೆಂದು ದೂರು ನೀಡಿತ್ತು.

ಫ್ರೆಶ್ ನ್ಯೂಸ್

Latest Posts

Featured Videos