ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನ

ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನ

ಹುಬ್ಬಳ್ಳಿ, ಮಾ.22, ನ್ಯೂಸ್ ಎಕ್ಸ್ ಪ್ರೆಸ್: ಪೌರಾಡಳಿತ ಸಚಿವ ಸಿ.ಎಸ್.​​ ಶಿವಳ್ಳಿ(58) ವಿಧಿವಶರಾಗಿದ್ದಾರೆ.

ಇಂದು ಮಧ್ಯಾಹ್ನ ಅವರಿಗೆ ಹೃದಯಾಘಾತವಾದ ಹಿನ್ನೆಲೆ ಹುಬ್ಬಳ್ಳಿಯ ಲೈಫ್​ಲೈನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಚಿವರು ಕೊನೆಯುಸಿರೆಳೆದಿದ್ದಾರೆ.

ನಾಲ್ಕು ದಿನಗಳ ಹಿಂದೆ ಧಾರವಾಡದಲ್ಲಿ ಐದಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಕಟ್ಟಡದ ಅವೇಶಷಗಳಡಿ ಸಿಲುಕಿದವರ ರಕ್ಷಣಾಕಾರ್ಯ ನಡೆಯುತ್ತಿದೆ. ಈ ರಕ್ಷಣಾಕಾರ್ಯದ ಜವಾಬ್ದಾರಿಯನ್ನ ಖುದ್ದು ಸಚಿವರೇ ನೋಡಿಕೊಂಡಿದ್ದರು. ಸ್ಥಳದಲ್ಲಿಯೇ ನಿಂತು ರಕ್ಷಣಾಕಾರ್ಯದಲ್ಲಿ ಭಾಗಿಯಾಗಿದ್ದರು.

ಹೀಗಾಗಿ ಕಳೆದ ನಾಲ್ಕು ದಿನಗಳಿಂದ ಸಚಿವ ಶಿವಳ್ಳಿ ಬಳಲಿದ್ದರು. ಅಲ್ಲದೇ ಅವರಿಗೆ ಮಧುಮೇಹ ಕೂಡ ಇತ್ತು ಎನ್ನಲಾಗಿದ್ದು, ಅದಕ್ಕೂ ಚಿಕಿತ್ಸೆ ಪಡೆಯುತ್ತಿದ್ದರು.

ಲೈಫ್​ಲೈನ್​ ಆಸ್ಪತ್ರೆಗೆ ಭಾರೀ ಪೊಲೀಸ್​ ಭದ್ರತೆ ಒದಗಿಸಲಾಗಿದೆ. ಶಿವಳ್ಳಿ ಅವರಿಗೆ ಹೃದಯಾಘಾತ ಸಂಭವಿಸಿದೆ ಅನ್ನೋ ಮಾಹಿತಿ ತಿಳಿದ ಅಭಿಮಾನಿಗಳು ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಆಸ್ಪತ್ರೆ ಮುಂದೆ ನೂರಾರು ಕಾರ್ಯಕರ್ತರು ಕೂಡ ಜಮಾಯಿಸಿರುವ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos