ಹುಳಿಮಾವು ಸಂತ್ರಸ್ತರ ಕೇಂದ್ರಕ್ಕೆ ಶಾಸಕ ಸತೀಶ್ ರೆಡ್ಡಿ ಭೇಟಿ

ಹುಳಿಮಾವು ಸಂತ್ರಸ್ತರ ಕೇಂದ್ರಕ್ಕೆ ಶಾಸಕ ಸತೀಶ್ ರೆಡ್ಡಿ ಭೇಟಿ

ಬೆಂಗಳೂರು, ನ. 29: ನಗರದ ಹೊರವಲಯ ಹುಳಿಮಾವುನಲ್ಲಿ ಕೆರೆ ಸ್ವಚ್ಚ ಮಾಡಲು ನೀರನ್ನು ಹೊರಹಾಕುವ ಭರದಲ್ಲಿ ಕೆರೆ ಕೋಡಿಯನ್ನು ಒಡೆದು,  ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಶಾಸಕ ಸತೀಶ್ ರೆಡ್ಡಿ ತಿಳಿಸಿದರು.

ಇಂದು ಸ್ಥಳೀಯ ಶಾಸಕರಾದ ಸತೀಶ್ ರೆಡ್ಡಿ  ನಗರದ ಹೊರವಲಯದ ಹುಳಿಮಾವು ಕೆರೆ ಕಟ್ಟೆ ಹೊಡೆದಿರುವ ಸ್ಥಳಕ್ಕೆ ಭೇಟಿ ನೀಡಿದರು. ಕೆಲವು ದಿನಗಳಿಂದ ನನಗೆ ಅನಾರೋಗ್ಯದ ಕಾರಣ ಸ್ಥಳಕ್ಕೆ ಭೇಟಿ ನೀಡಲಾಗದಿರುವುದಕ್ಕೆ ವಿಷಾದ ವ್ಯಕ್ತ ಪಡಿಸಿದ ಶಾಸಕ ಸತೀಶ್ ರೆಡ್ಡಿ  ಇಂತಹ ದುರ್ಘಟನೆ ಸಂಭವಿಸ ಬಾರದಿತ್ತು ಎಂದರು.

ಸಾರ್ವಜನಿಕರಿಗೆ ಆಗಿರುವ ಅನಾನುಕೂಲಕ್ಕೆ ವಿಷಾದ ವ್ಯಕ್ತ ಪಡಿಸಿದ ಶಾಸಕ ಸತೀಶ್ ರೆಡ್ಡಿ, ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಅನಾಹತ ಸಂಭವಿಸಿದ ವೇಳೆ ಹಗಲಿರುಳು ಶ್ರಮಿಸಿ ನಿರಾಶ್ರಿತರ ಸಹಾಯಕ್ಕೆ ದಾವಿಸಿ ಪುನರ್ ವಸತಿ ಹಾಗೂ ದಿನ ಬಳಕೆಯ ವಸ್ತುಗಳನ್ನು ಪುರೈಕೆ ಮಾಡಿ ಯಶಸ್ವಿಯಾಗಿ ನಿಬಾಯಿಸಿರುವುದಕ್ಕೆ ದನ್ಯವಾದ ಹೇಳಿದರು.

ಕೆರೆ ನೀರು ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುವವರಿಗೆ ಕೃತಜ್ಞತೆ ಹೇಳಿದ ಶಾಸಕರು ಅನಾಹುತ ಸಂಭವಿಸಲು ಕಾರಣರಾದವರನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವದೇಕಾರಣಕ್ಕೂ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು. ಈಗಾಗಲೇ ಸರ್ಕಾರದಿಂದ ಪ್ರತಿ ಸಂತ್ರಸ್ತ ಕುಟುಂಬಕ್ಕೆ 50 ಸಾವಿರ ಪರಿಹಾರ ಘೋಷಿಸಲಾಗಿದೆ. ಪೀಠೋಪಕರಣಗಳಿಗಾಗಿ 5 ಸಾವಿರ, ದಿಸಿ ಪದಾರ್ಥಗಳಿಗೆ 10 ಸಾವಿರ ನೀಡಲಾಗಿದೆ ಎಂದು ಶಾಸಕ ಸತೀಶ್ ರೆಡ್ಡಿ ತಿಳಿಸಿದರು.

ಯಾವುದೇ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದೆ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಏಕಾಏಕಿ ಕೆರೆ ನೀರನ್ನು ಹೊರಹಾಕಲು ಹೋಗಿ ಕೋಡಿ ಹೊಡೆದಿರುವುದು ಸಾಕಷ್ಟು ಅವಾಂತರಕ್ಕೆ ಕಾರಣವಾಗಿದ್ದು, ಸ್ಥಳೀಯರ ಶಾಪಕ್ಕೆ ಅಧಿಕಾರಿಗಳು ತುತ್ತಾಗುತ್ತಿದ್ದಾರೆ.

ಉದ್ದೇಶಪೂರ್ವಕವಾಗಿ ಮಾಡಲಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೆರೆ ಅಭಿವೃದ್ಧಿಗೆ 6ರಿಂದ 8 ಕೋಟಿ ಅನುದಾನ ಮೀಸಲಿಟ್ಟಿದ್ದೇವೆ. ಇನ್ನೇನು ಕಾಮಗಾರಿ ಶುರುವಾಗಬೇಕಿತ್ತು ಲೇಕ್ ಇಂಜಿನಿಯರ್ ಹೋಂಗಾರ್ಡ್ ಮೂಲಕ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ವಾಲ್ ಮಾರ್ಕ್ ಎಂಬ ಅಪಾರ್ಟ್ಮೆಂಟ್ ಹಿತದೃಷ್ಟಿ ಕಾಪಾಡಲಿಕ್ಕೆ ಏರಿ ಹೊಡೆಯಲಾಗಿದೆ. ಕೆರೆಯ ಪಕ್ಕದಲ್ಲೇ ಇರುವ ವಾಲ್ಮಾರ್ಟ್ ಬಹುಮಾಡಿ ಕಟ್ಟಡದ ಒಳಚರಂಡಿ-ನೀರು ಹರಿಯುತ್ತಿರಲಿಲ್ಲ ಕೆರೆಯಲ್ಲಿ ನೀರು ಹೆಚ್ಚಿದ ಕಾರಣ, ಒಳಚರಂಡಿ-ನೀರು ವಾಪಸ್ ಅಪಾಟ್ ಮೆಂಟ್ ಕಡೆಗೆ ನೀರು ಉಕ್ಕಿ ಹರಿಯುತ್ತಿತ್ತು ಎನ್ನಲಾಗಿದೆ.

ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವಂತಹ ಕಾರ್ಯಗಳು  ಭರದಿಂದ ನಡೆದಿವೆ. 50,000 ಪಾಲಿಕೆಯಿಂದ ನೀಡಲಾಗಿದೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ, ಯಾರಿಗೂ ಯಾವುದೆ ಜೀವ ಹಾನಿ ಸಂಭವಿಸಿಲದಿರುವುದಕ್ಕೆ ದೇವರ ಕೃಪೆ ಎಂದು ತಿಳಿಸಿದರು.

 

 

 

ಫ್ರೆಶ್ ನ್ಯೂಸ್

Latest Posts

Featured Videos