ರೆಸಾರ್ಟ್ ನಲ್ಲಿ ಫೈಟ್ ಮಾಡಿ ನಾಪತ್ತೆಯಾಗಿದ್ದ ಶಾಸಕ ಗಣೇಶ್ ಕೊನೆಗೂ ಅರೆಸ್ಟ್!

ರೆಸಾರ್ಟ್ ನಲ್ಲಿ ಫೈಟ್ ಮಾಡಿ ನಾಪತ್ತೆಯಾಗಿದ್ದ ಶಾಸಕ  ಗಣೇಶ್ ಕೊನೆಗೂ ಅರೆಸ್ಟ್!

ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಜನವರಿ 20ರ ರಾತ್ರಿ ಈಗಲ್ಟನ್ ರೆಸಾರ್ಟ್‍ನಲ್ಲಿ ಹಲ್ಲೆ ಮಾಡಿದ್ದ ಆರೋಪದ ಮೇಲೆ ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಕೊನೆಗೂ ಅರೆಸ್ಟ್ ಆಗಿದ್ದಾರೆ.

ಘಟನೆಯ ನಂತ್ರ ತಲೆ ಮರೆಸಿಕೊಂಡಿದ್ದರು. ಈ ನಡುವೆ, ನಿನ್ನೆಯಷ್ಟೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್‍ನಲ್ಲಿ ತಮ್ಮ ವಕೀಲರ ಮೂಲಕ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್ ತೆಗೆದುಕೊಂಡಿದ್ದರು.

ರಾಮನಗರ ಪೊಲೀಸರು ಶಾಸಕ ಕಂಪ್ಲಿ ಗಣೇಶ್ರನ್ನು ಮುಂಬೈನಲ್ಲಿ ಅರೆಸ್ಟ್ ಮಾಡಿದ್ದಾರೆ. ಇಂದು ರಾತ್ರಿ ವೇಳೆಗೆ ಗಣೇಶ್ರನ್ನು ರಾಮನಗರಕ್ಕೆ ಕರೆತರುವ ಅಂದಾಜಿದ್ದು, ಕೋರ್ಟ್ ಮುಂದೆ ಹಾಜರುಪಡಿಸುತ್ತಾರೆ ಎಂದು ತಿಳಿದುಬಂದಿದೆ. ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಶಾಸಕ ಗಣೇಶ್ ಬಂಧನಕ್ಕೆ ಒತ್ತಡ ಹೆಚ್ಚಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos