ಮಿಂಟೋ: ವೈದ್ಯರ ಎಡವಟ್ಟಿನಿಂದ ವೃದ್ಧನ ದೃಷ್ಟಿ ಮಾಯಾ!

ಮಿಂಟೋ: ವೈದ್ಯರ ಎಡವಟ್ಟಿನಿಂದ ವೃದ್ಧನ ದೃಷ್ಟಿ ಮಾಯಾ!

ಬೆಂಗಳೂರು, ನ. 08: ವರ್ಷದ ಹಿಂದೆ ನಾನು ಮಿಂಟೋ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಂಡಿದ್ದೆ. ನಾನು ಮೈಸೂರಿನವನು. ಡಾ.ಚಿನ್ಮಯಿ ಹೆಸರಿನ ಸ್ಟುಡೆಂಟ್ ಆಪರೇಷನ್ ಮಾಡಿದ್ದರು. ಈಗ ನನಗೆ ಕಣ್ಣು ಕಾಣಿಸುತ್ತಿಲ್ಲ. ನನಗೀಗ ಯಾರು ಪರಿಹಾರ ಕೊಡ್ತಾರೆ? ಹೀಗೆ ವೈದ್ಯರ ವಿರುದ್ಧ ಹೀನಾಮಾನವಾಗಿ ಜಾಡಿಸಿದ ವೃದ್ಧನ ಹೆಸರು ವೆಂಕಟಾಚಲಪತಿ.

ಕರವೇ ಕಾರ್ಯಕರ್ತರು ವೈದ್ಯರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಮಿಂಟೋ ವೈದ್ಯರು ಪ್ರತಿಭಟನೆ ನಡೆಸ್ತಿದ್ದಾರೆ, ಇಂದು ರಾಜ್ಯಾದ್ಯಂತ ಒಪಿಡಿ ಬಂದ್ ಮಾಡಿ ಮುಷ್ಕರ ನಡೆಸಲಾಗುತ್ತಿದೆ. ಇದರ ಬೆನ್ನಲ್ಲೇ, ಮಿಂಟೋ ವೈದ್ಯರ ವಿರುದ್ಧ ಆರೋಪವೊಂದು ಕೇಳಿ ಬಂದಿದೆ. ಮಿಂಟೋ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದ ವೃದ್ಧರೊಬ್ಬರು ದೃಷ್ಟಿ ಕಳೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಮಿಂಟೋ ವೈದ್ಯರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ವೆಂಕಟಾಚಲಪತಿ ಆಗಮಿಸಿ, ಗಲಾಟೆ ನಡೆಸಿದ್ರು.

ಡಾ.ಚಿನ್ಮಯಿ ಎನ್ನುವವರು ನನಗೆ ಆಪರೇಷನ್ ಮಾಡಿದ್ರು. ಅವರು ಫೈನಲ್ ಇಯರ್ ಸ್ಟೂಡೆಂಟ್ ಆಗಿದ್ರು. ಆಪರೇಷನ್ ಸಕ್ಸಸ್ ಆಗಿದೆ ಅಂತಾ ಒಳ್ಳೆಯ ಮಾತು ಹೇಳಿ ಕಳಿಸಿದ್ರು’ ಅಂತಾ ಮೈಸೂರಿನ ವೃದ್ಧ ವೆಂಕಟಾಚಲಪತಿ ಅಳಲು ತೋಡಿಕೊಂಡಿದ್ದಾರೆ.

‘ಈಗ ನನಗೆ ಕಣ್ಣು ಕಾಣಿಸುತ್ತಿಲ್ಲ, ಪರಿಹಾರ ಬೇಕು’

ಈಗ ನನ್ನದು ಆಪರೇಷನ್ ಆಗಿದೆ, ಕಣ್ಣು ಹೋಗಿದೆ. ಒಳ್ಳೆಯ ಮಾತು ಹೇಳಿ ವೈದ್ಯರು ನನ್ನನ್ನು ಕಳುಹಿಸಿಬಿಟ್ಟರು. ನಾನು ಕೆಲಸ ಬಿಟ್ಟು ಬೀಡ್ತೀನಿ ಅಂತಾ ವೈದ್ಯರೊಬ್ಬರು ತಿಳಿಸಿದ್ರು. ಆಗ ನಾನು ಏನಕ್ಕೆ ಬಿಡ್ತಿಯಮ್ಮಾ ಎಂದೆ? ಇದೇ ತರಹ 10 ಸಾವಿರ ಆರಪೇಷನ್ ಆಗಿದೆ ಅಂತಾ ವೈದ್ಯರು ಹೇಳಿದ್ರು. ಏನೂ ಮಾಡ್ಬೇಡಿ ಅಂತ ನನ್ನಲ್ಲಿ ಎಂ.ಡಿ. ಕೇಳಿಕೊಂಡ್ರು. ಈಗ ನನಗೆ ಪರಿಹಾರ ಬೇಕು. ಈಗ ಡೈರೆಕ್ಟರ್ ಹತ್ತಿರ ಹೋಗ್ತೀನಿ. ಒಪಿಡಿ ಮುಚ್ಚಿಬಿಟ್ಟರೆ ಆಗಿ ಹೋಯ್ತಾ..? ಡಾಕ್ಟರ್ ಬರಲಿಲ್ಲ ಅಂದ್ರೆ ಆಗ ಹೋಯ್ತಾ? ಅಂತಾ ವೆಂಕಟಾಚಲಪತಿ ಪ್ರಶ್ನಿಸಿದ್ರು.

 

ಫ್ರೆಶ್ ನ್ಯೂಸ್

Latest Posts

Featured Videos