ರಾಷ್ಟ್ರೀಯ ಪೋಷಣ ಅಭಿಯಾನಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ

ರಾಷ್ಟ್ರೀಯ ಪೋಷಣ ಅಭಿಯಾನಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ

ಚಿಕ್ಕೋಡಿ, ಜ. 25:  ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಸಸಿಗೆ ನೀರರೆಯುವ ಮೂಲಕ ಸಚಿವೆ ಶಶಿಕಲಾ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಬಸವರಾಜ ವರವಟ್ಟೆ ಮುಂತಾದವರು ಚಾಲನೆ  ನೀಡಿದರು.

ಅಂಗನವಾಡಿ ಕೇಂದ್ರಗಳ ಮಕ್ಕಳ ದಾಖಲಾತಿ, ಹಾಜರಾತಿ, ವಿವರಗಳನ್ನು ದಾಖಲಿಸಲು ಫೆಬ್ರುವರಿ ಮೊದಲ ವಾರದಲ್ಲಿ ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟಫೋನ ವಿತರಿಸಲಾಗುವುದು. ಯಕ್ಸಂಬಾ ಪಟ್ಟಣದ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಶಿಶೂ ಅಭಿವೃದ್ಧಿ ಯೋಜನೆ ನಿಪ್ಪಾಣಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ರಾಷ್ಟ್ರೀಯ ಪೋಷಣ ಅಭಿಯಾನಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ನಿಮ್ಮ ಆರ್ಶೀವಾದದಿಂದ ನಾನು ಮಂತ್ರಿಯಾಗಿದ್ದೇನೆ ಈ ಮಂತ್ರಿ ಸ್ಥಾನ ಯಾರಿಗೆ ಸಿಕ್ಕಿದೆಯೋ ಅವರು ಪುಣ್ಯವಂತರು. ಈ ಇಲಾಖೆ ಪ್ರತಿಯೊಂದು ಮನೆಯಲ್ಲಿರುವ ಸ್ತ್ರೀಯರು, ಮಕ್ಕಳು  ಅಂಗವಿಕಲರು ಇದ್ದಾರೆ ಆ ಮನೆಯಲ್ಲಿ ನನ್ನ ಖಾತೆ ಇದೆ ಅಂತ ಹೇಳಲು ಖುಷಿ ಅನಿಸುತ್ತದೆ. ದೇಶದಲ್ಲಿ ಎಷ್ಟು ಜನ ಗಂಡು ಮಕ್ಕಳು ಇದ್ದಾರೆ ಅಷ್ಟು ಜನ ಹೆಣು ಮಕ್ಕಳಿದ್ದಾರೆ. ಈ ಖಾತೆ ನನಗೆ ಸಿಕ್ಕಿದೆ ಅಂದ ಮೇಲೆ ಹೆಣ್ಣು ಮಕ್ಕಳ ಬಗ್ಗೆ ಯೋಚನೆ ಮಾಡಬೇಕು. ಪ್ರತಿಯೊಂದು ಮನೆ ಮನೆಗೂ ಅದರ ಯೋಜನೆಗಳನ್ನು ಮುಟ್ಟಿಸುವಂತಹ ಕಾರ್ಯಗಳನ್ನು ಮಾಡಬೇಕು. ನನ್ನ ಜವಾಬ್ದಾರಿ ನನ್ನ ಮನೆ ಅಷ್ಟೇ ಅಲ್ಲದೇ ಇಡೀ ರಾಜ್ಯದಲ್ಲಿರುವ ಪ್ರತಿಯೊಂದು ಮನೆಯೂ ಸಹ ನನ್ನ ಕುಟುಂಬ ಅಂತ ತಿಳಿದುಕೊಂಡು ಎಲ್ಲರೂ ಸುಖದಿಂದ ಸಮಾಧಾನದಿಂದ ಇರಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತ್ರತ್ವದ ಯೋಜನೆಗಳನ್ನು ನಾವು ನಿಮ್ಮಮನೆಗೆ ಮುಟ್ಟಿಸುವಂತಹ ಕಾರ್ಯಗಳನ್ನು ನಾವೆಲ್ಲರು ಕೂಡಿ ಮಾಡಬೇಕು. ಅದರಲ್ಲಿ ನನ್ನ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಮೇಲ್ವಿಚಾರಕಿಯರು ನಾವೆಲ್ಲರೂ ನಿಮ್ಮ ಜೊತೆ ಇದ್ದಿವಿ ನಿಮ್ಮನ್ನು ಕರೆಸಿರುವ ಉದ್ಧೇಶವೆನೆಂದರೆ ನೀವು ಸಹ ನಮ್ಮ ಜೊತೆ ಕೈ ಜೋಡಿಸಬೇಕೆಂದು ಹೇಳಿದರು.ತಾಯಿ ಎರಡು ಪಟ್ಟು ಆಹಾರ ಸೇವಿಸಿದರೆ ಹೊಟ್ಟೆಯಲ್ಲಿ ಮಗೂವಿಗೂ ಅದರ ಸ್ವಲ್ಪ ಅಂಶ ದೊರೆಯುತ್ತದೆ. ತರಕಾರಿ ಸೊಪ್ಪು, ಹಣ್ಣು, ಮೊಳಕೆ ಕಾಲುಗಳನ್ನು ತಿನ್ನಬೇಕು. ಇದರಿಂದ ಪೌಷ್ಟಿಕ ಆಹಾರ ದೇಹಕ್ಕೆ ದೊರೆಯುತ್ತದೆ. ಮಗು ಆರೋಗ್ಯವಾಗಿ ಬೆಳೆಯುತ್ತದೆ. ಪೌಷ್ಟಿಕಾಂಶದ ಕೊರತೆಯಿಂದ ಮಗು  ಜನಿಸುವ ಸಮಯದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದನ್ನು ಹೋಗಲಾಡಿಸುವ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನರು ಇದರ ಸದುಪಯೋಗಪಡೆದುಕೊಳ್ಳಬೇಕು. ಮಾತೃವಂದನಾ ಯೋಜನೆಯಡಿಯಲ್ಲಿ ಗರ್ಭಿಣಿಯರಿಗೆ 6000 ರೂ ನೀಡುವಂತಹ ಕೆಲಸ ನಮ್ಮ ಸರ್ಕಾರ ಮಾಡಿದೆ.

ನಂತರ ಶಿವಮೊಗ್ಗ ಸಮನ್ವಯ ಟ್ರಸ್ಟ ಕಲಾತಂಡದಿಂದ ಪೋಷಣ ಅಭಿಯಾಣ, ಬಾಲ್ಯವಿವಾಹ ಬೇಟಿ ಬಚಾವೋ ಬೇಟಿ ಪಡಾವೋ ಹಗೂ ಮಾತೃವಂದನಾ ಯೋಜನೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೀದಿನಾಟಕ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳಗಾವಿ ಉಪನಿರ್ದೇಶಕರಾದ ಬಸವರಾಜ ವರವಟ್ಟಿ, ಜ್ಯೋತಿ ಸಂಸ್ಥೆಯ ನಿರ್ದೇಶಕರಾದ ಕಲ್ಲಪ್ಪ ಜಾಧವ,ಆಶ್ಯಾಜ್ಯೋತಿ ವಿಶೇಷ ಶಾಲೆಯ ಅದ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ, ಸಾವಿತ್ರಿ ಗುಗ್ಗರಿ, ಮಂಜುಶ್ರೀ ಕಟ್ಟಿಕರ, ಶಿವಮೊಗ್ಗ ಬೀದಿನಾಟಕ ಮುಖ್ಯಸ್ಥರಾದ ಮಂಜುಳಾ ಹಿರೇಮಠ, ಹಾಗೂ ಚಿಕ್ಕೋಡಿ ನಿಪ್ಪಾಣಿ ವಲಯದ ಎಲ್ಲಾ ಅಂಗನವಾಡಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತರು, ಸಹಾÀಯಕಿಯರು, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಮಹಿಳೆಯರು ಉಪಸ್ಥಿತರಿದದರು.

ಫ್ರೆಶ್ ನ್ಯೂಸ್

Latest Posts

Featured Videos