ಸಚಿವ ಗೋಯಲ್ ಮನೆಯಲ್ಲಿ ಕಂಪ್ಯೂಟರ್ ಮಾಹಿತಿ ಕಳವು

ಸಚಿವ ಗೋಯಲ್ ಮನೆಯಲ್ಲಿ ಕಂಪ್ಯೂಟರ್ ಮಾಹಿತಿ ಕಳವು

ನವದೆಹಲಿ, ಅ. 3 : ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮನೆಯಲ್ಲಿ ಕಂಪ್ಯೂಟರ್ ನಲ್ಲಿದ್ದ ಮಾಹಿತಿ ಕಳವು ಮಾಡಿರುವ 25 ವರ್ಷದ ಮನೆ ಕೆಲಸದ ಯುವಕನನ್ನು ಪೊಲೀಸರು ಬಂಧಿಸಿರುವುದಾಗಿ ಗುರುವಾರ ತಿಳಿಸಿದ್ದಾರೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಂಬಂಧಿಸಿದ ಕಂಪ್ಯೂಟರ್ ನಲ್ಲಿದ್ದ ಮಾಹಿತಿಯನ್ನು ಮನೆಕೆಲಸ ಮಾಡುತ್ತಿದ್ದ ವಿಷ್ಣು ಕುಮಾರ್ ಎಂಬಾತ ಅಪರಿಚಿತ ವ್ಯಕ್ತಿಗಳಿಗೆ ನೀಡಿರುವುದಾಗಿ ಆರೋಪಿಸಲಾಗಿದೆ.
ದೆಹಲಿ ನಿವಾಸಿಯಾಗಿರುವ ಆರೋಪಿ ವಿಷ್ಣು ಕುಮಾರ್ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಂಗಳವಾರ ವಿಷ್ಣುವನ್ನು ಬಂಧಿಸಿದ್ದು, ಬುಧವಾರ ದೆಹಲಿಗೆ ಕರೆತರಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos