ಸಿಲಿಕಾನ ಸಿಟಿಯಲ್ಲಿ ಜಮಾಯಿಸಿದ ಲಕ್ಷಾಂತರ ಹೋರಾಟಗಾರರು

ಸಿಲಿಕಾನ ಸಿಟಿಯಲ್ಲಿ ಜಮಾಯಿಸಿದ ಲಕ್ಷಾಂತರ ಹೋರಾಟಗಾರರು

ಬೆಂಗಳೂರು, ಡಿ. 23: ರಾಜ್ಯದಲ್ಲಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧಿ ಪ್ರತಿಭಟನೆ ಇದೀಗ ಬೇರೆಯದೇ ರೂಪ ತಳೆದಿದಿ. ಅಲ್ಲದೆ, ಈ ಮುಂಚೆ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಹೋರಾಟ ಪ್ರಸ್ತುತ ರಾಜ್ಯಾದ್ಯಂತ ವ್ಯಾಪಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ಸುಮಾರು 30ಕ್ಕೂ ಅಧಿಕ ಮುಸ್ಲಿಂ ಸಂಘಟನೆಗಳು ಇಂದು ರಾಜ್ಯಾದ್ಯಂತ ಬೀದಿಗಿಳಿದಿವೆ. ಶಾಂತಿಯುತ ಪ್ರತಿಭಟನೆ ಹಾಗೂ ರಾಜ್ಯಾದ್ಯಂತ ಶಾಂತಿಯುತ ಜಾಥಕ್ಕೆ ಕರೆ ನೀಡಿವೆ.

ಸಿಎಎ ಕಾಯ್ದೆಯ ವಿರುದ್ಧ ಕಳೆದ 2 ತಿಂಗಳಿನಿಂದ ಉಗ್ರ ಹೋರಾಟ ನಡೆಸುತ್ತಿರುವ ಪ್ರಗತಿಪರ ಹೋರಾಟಗಾರರ ಜೊತೆ ಇದೀಗ 30 ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳೂ ಸಹ ಒಂದಾಗಿವೆ. ಪರಿಣಾಮ ಎಲ್ಲಾ ಸಂಘಟನೆಯಿಂದ ಸುಮಾರು 1 ಲಕ್ಷಕ್ಕೂ ಅಧಿಕ ಸಂಖ್ಯೆಯ ಜನ ಇಂದು ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದಾರೆ.

ನಗರದ ಖುದ್ದೂಸಾ ಈದ್ಗಾ ಮೈದಾನದಲ್ಲಿ ಶಾಂತಿ ಸಭೆ ಏರ್ಪಡಿಸಲಾಗಿದೆ. ಈ ಶಾಂತಿ ಸಭೆಯಲ್ಲಿ ಕೇಂದ್ರ ಸರ್ಕಾರದ ಸಿಎಎ ಕಾಯ್ದೆಯ ಕುರಿತು ತಮ್ಮ ಪ್ರತಿಭಟನೆಯನ್ನು ಶಾಂತಿಯುತವಾಗಿ ದಾಖಲಿಸಲಿರುವ ಪ್ರತಿಭಟನಾಕಾರರು ನಂತರ ನಗರದ ಪ್ರಮುಖ ಭಾಗಗಳಲ್ಲಿ ಶಾಂತಿಯುತ ಜಾಥ ನಡೆಸಲಿದ್ದಾರೆ. ಪರಿಣಾಮ ನಗರದಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸ್ ಇಲಾಖೆ ನಗರದ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ. ಅಲ್ಲದೆ ಬಿಗಿ ಪೊಲೀಸ್ ಭದ್ರತೆಯನ್ನೂ ನಿಯೋಜಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos