ಇಂದು ಕೋಟಿಗೊಬ್ಬ-3 ಮೋಶನ್ ಪೋಸ್ಟರ್ ರಿಲೀಸ್!

ಇಂದು ಕೋಟಿಗೊಬ್ಬ-3 ಮೋಶನ್ ಪೋಸ್ಟರ್ ರಿಲೀಸ್!

ಬೆಂಗಳೂರು, ಜ. 14: ಸುದೀಪ್‌ ಅಭಿನಯದ “ಕೋಟಿಗೊಬ್ಬ-3′ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರ ಈಗ ಕೊನೆಯ ಹಂತದ ಚಿತ್ರೀಕರಣದಲ್ಲಿ. ಸದ್ಯ “ಕೋಟಿಗೊಬ್ಬ-3′ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ಕಲರ್‌ಫ‌ುಲ್‌ ಸೆಟ್‌ನಲ್ಲಿ ಹಾಡನ್ನು ಚಿತ್ರೀಕರಿಸಲಾಗುತ್ತಿದೆ.

ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕೋಟಿಗೊಬ್ಬ-3 ಚಿತ್ರತಂಡ ಸಂಕ್ರಾಂತಿ ಹಬ್ಬದ ಪ್ರಯುಕ್ತ ಉಡುಗೊರೆ ನೀಡಲಿದೆ.

ಹೌದು, ಇಂದು ಚಿತ್ರ ತಂಡ ಸಂಜೆ 6 ಗಂಟೆಗೆ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಿದೆ. ಹೊಸ ಲುಕ್ನಲ್ಲಿ ಕಿಚ್ಚ ಟೋಪಿ, ದುಂಡನೆಯ ಕನ್ನಡಕ ಹಾಕ್ಕೊಂಡು ಫುಲ್ ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ರು. ಕೋಟಿಗೊಬ್ಬ-2 ಚಿತ್ರದಲ್ಲಿ ಸುದೀಪ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಕಿಚ್ಚನ ಪಾತ್ರದ ಶೇಡ್ ಮತ್ತು ಲುಕ್ ಹೇಗೆಲ್ಲಾ ಇರಲಿದೆ ಅನ್ನೋದಕ್ಕೆ ಮೋಷನ್ ಪೋಸ್ಟರ್ನಲ್ಲಿ ಉತ್ತರ ಸಿಗಬಹುದಾ ಅಂತಾ ಕಿಚ್ಚನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇದೀಗ 2 ಹಾಡುಗಳ ಶೂಟಿಂಗ್ನಲ್ಲಿ ಬ್ಯುಸಿ ಆಗಿದೆ. ಚಿತ್ರದ ಕಥೆಯನ್ನು ಸುದೀಪ್ ಬರೆದಿದ್ದು, ಶಿವ ಕಾರ್ತಿಕ್ ನಿರ್ದೇಶನ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos