ಮಿಲ್ಕಿ ಬ್ಯೂಟಿ ತಮನ್ನಾ ಬರ್ತ್ ಡೇ

ಮಿಲ್ಕಿ ಬ್ಯೂಟಿ ತಮನ್ನಾ ಬರ್ತ್ ಡೇ

ಮುಂಬೈ, ಡಿ. 22 : ತಮನ್ನಾ ಇದೀಗ 30 ವಸಂತಗಳನ್ನು ಪೂರೈಸಿ 31ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದಾರೆ. ಮಿಲ್ಕಿ ಬ್ಯೂಟಿ ನಟಿ ತಮನ್ನಾ ಕನ್ನಡದ ‘ಕೆಜಿಎಫ್’ ಸಿನಿಮಾದಲ್ಲಿ ಒಂದು ಐಟಂ ಸಾಂಗ್ಗೆ ಹೆಜ್ಜೆ ಹಾಕಿದ್ದರು. ಅಲ್ಲದೆ ತೆಲುಗಿನ ‘ಸರಿಲೇರು ನೀಕೆವ್ವರು’ ಚಿತ್ರದಲ್ಲೂ ಅವರು ಐಟಂ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ. ಆದರೆ ಅವರು ಈ ಸಿನಿಮಾದಲ್ಲಿ ಹೇಗೆ ಕಾಣಿಸಲಿದ್ದಾರೆ ಎಂಬ ಬಗ್ಗೆ ಹಲವರಿಗಿದ್ದ ಕುತೂಹಲ ಇದೀಗ ತಣಿದಿದೆ. ಅದಕ್ಕೆ ಕಾರಣ, ಅವರ ಬರ್ತ್ ಡೇ. ಅಂದರೆ ಜನ್ಮದಿನದ ಸಂದರ್ಭದಲ್ಲಿ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ, ಆ ಮೂಲಕ ತಮನ್ನಾಗೆ ಶುಭ ಹಾರೈಸಿದೆ. ಜೀನ್ಸ್- ಶೂ ಜತೆಗೆ ಮೈ ಕಾಣುವ ಟಾಪ್ ಧರಿಸಿ ಐಟಂ ಸಾಂಗ್ನಲ್ಲಿ
ತಮನ್ನಾ ಹೆಜ್ಜೆ ಹಾಕುವ ಜೋಶ್ನಲ್ಲಿರುವ ಭಂಗಿಯೊಂದರ ಫೋಟೋ ಬಿಡುಗಡೆ ಮಾಡಿರುವ ಚಿತ್ರತಂಡ, ಅವರ ಜನ್ಮದಿನದ ಸಂಭ್ರಮವನ್ನು ಹೆಚ್ಚಿಸಿದೆ. ಚಿತ್ರತಂಡದ ಹಲವರು ಹಾಗೂ ಸಿನಿಪ್ರಿಯರನೇಕರು ಈ ಫೋಟೋ ಹಂಚಿಕೊಂಡು ತಮನ್ನಾಗೆ ಶುಭ ಕೋರಿದ್ದಾರೆ. ಅನಿಲ್ ಸುಂಕರ, ದಿಲ್ ರಾಜು ನಿರ್ವಣದಲ್ಲಿ ಮೂಡಿಬಂದಿರುವ ‘ಸರಿಲೇರು ನೀಕೆವ್ವರು’ ಸಿನಿಮಾಗೆ ನಿರ್ದೇಶಕ ಅನಿಲ್ ರವಿಪುಡಿ ಆಕ್ಷನ್-ಕಟ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos