ಹೆಂಡತಿಯನ್ನು ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ ಕ್ರಿಕೆಟಿಗ

ಹೆಂಡತಿಯನ್ನು ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ ಕ್ರಿಕೆಟಿಗ

ನವದೆಹಲಿ, ಏ. 29, ನ್ಯೂಸ್ ಎಕ್ಸ್ ಪ್ರೆಸ್:  ಕ್ರಿಕೆಟರ್ ಮೊಹಮ್ಮದ್ ಶಮಿ ಮತ್ತು ಆತನ ಪತ್ನಿ ಹಸೀದ್ ವಿವಾದ ಮತ್ತೊಮ್ಮೆ ಚರ್ಚೆಗೆ ಬಂದಿದೆ ಶಮಿ ಮತ್ತು ಹಸೀನ್ ನಡುವೆ ಜಗಳ ಇದೇನು ಹೊಸದಲ್ಲ. ಆದರೆ ಶಮಿಯಿಂದ ದೂರವಾಗಿದ್ದ ಹಸೀನ್ ಇದ್ದಕ್ಕಿದ್ದ ಹಾಗೇ ಶಮಿ ಮನೆಗೆ ಬಂದಿದ್ದಾರೆ. ಹಸೀನ್ ಜಹಾನ್, ಶಮಿ ಅಮ್ರೋಹಾ ಜಿಲ್ಲೆಯ ಗ್ರಾಮ ಸಹಸ್ಪುರ್ ಅಲಿನಗರ್ ಗೆ ಬಂದಿದ್ದರು. ಶಮಿ ತಮ್ಮ ತಂದೆ ತಾಯಿಗಾಗಿ ಮಾಡಿದ್ದ ಮನೆಯಲ್ಲಿ ಪೋಷಕರು ಈಗಾಗಲೇ ವಾಸವಾಗಿದ್ದರು.

ಆದರೆ ಶಮಿ ಹೆಂಡತಿ ಬಂದು ಶಮಿ ತಂದೆ ತಾಯಿ ಇದ್ದ ಮನೆಯನ್ನು ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ್ದರಂತೆ.  ಆದರೆ, ಶಮಿ ಮೊದಲೇ ಇದಕ್ಕೆ ಸಿದ್ಧರಾಗಿದ್ದರು. ಮಧ್ಯರಾತ್ರಿ ಪೊಲೀಸ್ ಕರೆಯಿಸಿ, ಹಸೀನ್ ರನ್ನು ಮನೆಯಿಂದ ಹೊರ ಹಾಕಿದ್ದಾರೆ. ನಾನು ಮಾವನ ಮನೆಗೆ ಬಂದರೆ ಪೊಲೀಸರನ್ನು ಕರೆಸಿ ಮನೆಯಿಂದ ಹೊರ ಹಾಕಿದ್ದಾರೆ. ಮಧ್ಯರಾತ್ರಿ 12 ಗಂಟೆ ಆಗಿದೆ, ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಪೊಲೀಸರ ವಿರೋಧದ ನಡುವೆಯೇ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ ಹಸೀನ್.

ಫ್ರೆಶ್ ನ್ಯೂಸ್

Latest Posts

Featured Videos