ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಿಗ್ನಲ್‌ ದೋಷ!

ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಿಗ್ನಲ್‌ ದೋಷ!

ಬೆಂಗಳೂರು: ಬೆಂಗಳೂರು ಮೆಟ್ರೋ ತಾಂತ್ರಿಕ ದೋಷಗಳ ಕಾರಣ ಪದೆಪದೇ ಸುದ್ದಿಯಾಗುತ್ತಿದೆ. ನಮ್ಮ ಮೆಟ್ರೋ ನೇರಳೆ ಮಾರ್ಗದ ರೈಲು ಸಂಚಾರ ಮತ್ತೆ ಸುದ್ದಿಯಲ್ಲಿದೆ. ಇಂದು ಈ ಮಾರ್ಗದ ರೈಲು ಸಂಚಾರದಲ್ಲಿ ತೊಂದರೆ ಉಂಟಾಗಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ವಿಚಾರವಾಗಿ ಬೆಂಗಳೂರು ಮಟ್ರೋ ವಿಷಾದ ವ್ಯಕ್ತಪಡಿಸಿದೆ.

ನಮ್ಮ ಮೆಟ್ರೋದ ಬೈಯಪ್ಪನಹಳ್ಳಿ ಮತ್ತು ಗರುಡಾಚಾರ್‌ಪಾಳ್ಯ ನಡುವಿನ ನೇರಳೆ ಮಾರ್ಗದಲ್ಲಿ ಸಿಗ್ನಲ್ ದೋಷ ಉಂಟಾಗಿದೆ. ಸಿಗ್ನಲಿಂಗ್‌ನಲ್ಲಿ ಉಂಟಾದ ತಾಂತ್ರಿಕ ದೋಷವನ್ನು ಸರಿಪಡಿಸುವ ಕೆಲಸ ಪ್ರಗತಿಯಲ್ಲಿದೆ. ಈ ದೋಷ ಕಾರಣ ಈ ಮಾರ್ಗದಲ್ಲಿ ರೈಲುಗಳು ನಿರ್ಬಂಧಿತ ವೇಗದಲ್ಲಿ ಸಂಚರಿಸುತ್ತಿವೆ ಎಂದು ಬೆಂಗಳೂರು ಮೆಟ್ರೋ ಟ್ವೀಟ್ ಮಾಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos