ಮೆಟ್ರೋ ಕಾಮಗಾರಿ ಪ್ರಸ್ತುತ ಸ್ಥಿತಿ

ಮೆಟ್ರೋ ಕಾಮಗಾರಿ ಪ್ರಸ್ತುತ ಸ್ಥಿತಿ

ಬೆಂಗಳೂರು, ಫೆ. 28, ನ್ಯೂಸ್ಎಕ್ಸ್ ಪ್ರೆಸ್: ಕಾಡುಗೋಡಿಯಲ್ಲಿ ನಮ್ಮ ಮೆಟ್ರೋ ಡಿಪೋ ನಿರ್ಮಾಣ ಕಾರ್ಯ ಇನ್ನು 2 ತಿಂಗಳಲ್ಲಿ ಅಂದರೆ ಮೇ ನಲ್ಲಿ ಆರಂಭಗೊಳ್ಳಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮೆಟ್ರೋ ಮಾರ್ಗದ ಕೊನೆಯಲ್ಲಿ ನೇರಳೆ ಮಾರ್ಗಕ್ಕಾಗಿ ನಿರ್ಮಾಣವಾಗಲಿರುವ ಕಾಡುಗೋಡಿ ಡಿಪೋಗೆ ಇದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ, ಈಗ ಡಿಪೋದ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ.

ಮೈಸೂರು ರಸ್ತೆ-ಬೈಯಪ್ಪನಹಳ್ಳಿ ರಸ್ತೆ ನೇರಳೆ ಮಾರ್ಗವನ್ನು ವೈಟ್ಫೀಲ್ಡ್ವರೆಗೆ ವಿಸ್ತರಿಸುವ ಕಾಮಗಾರಿ ಅತೀ ವೇಗವಾಗಿ ನಡೆಯುತ್ತಿದೆ. ಇನ್ನೊಂದೆಡೆ ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ ಸಾಗುವ ಮಾರ್ಗದ ಕಾಮಗಾರಿ ಕೂಡ ನಡೆಯುತ್ತಿದೆ. 2ನೇ ಹಂತದ ಈ ಯೋಜನೆಗಳಿಗೆ ಚುರುಕು ನೀಡಲಾಗಿದೆ.

ಕಾಡುಗೋಡಿಯಲ್ಲಿ ಅರಣ್ಯ ಭೂಮಿಯಲ್ಲಿ ಡಿಪೊ ನಿರ್ಮಿಸಬೇಕಿದ್ದರಿಂದ ಪ್ರಕ್ರಿಯೆಗಳು ತಡವಾಗುವ ಆತಂಕವಾಗಿತ್ತು.ಆದರೆ ಇದೀಗ ಎಲ್ಲಾ ಅಡಚನೆಗಳು ನಿವಾರಣೆಯಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾಡುಗೋಡಿ ಡಿಪೋಗಾಗಿ ಅರಣ್ಯ ಭೂಮಿಯನ್ನು ಪಡೆಯಲು ಸುಮಾರು 4 ವರ್ಷ ಕಾಯಬೇಕಾಯಿತು.ಕಾಡುಗೋಡಿಯಲ್ಲಿ 45 ಎಕರೆ ಜಾಗ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. ಪರ್ಯಾಯ ಭೂಮಿ ನೀಡಿ ಇದೀಗ ಈ ಕಾಮಗಾರಿಗೆ ವೇಗ: 15.50 ಕಿ.ಮೀ ಉದ್ದದ ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮಾರ್ಗದ ಕಾಮಗಾರಿ ಶೇ.34 ರಷ್ಟು ಮುಗಿದಿದ್ದು ಭೂಸ್ವಾಧೀನ ಪ್ರಕ್ರಿಯೆ ಶೇ.97ರಷ್ಟು ಮುಕ್ತಾಯಗೊಂಡಿದೆ.ರಣ್ಯ ಇಲಾಖೆ ಜಾಗವನ್ನು ಪಡೆಯಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos