ನಮ್ಮ ಮೆಟ್ರೋ ಆದಾಯದ ಹಳಿಗೆ.

ನಮ್ಮ ಮೆಟ್ರೋ ಆದಾಯದ ಹಳಿಗೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮೆಟ್ರೋಗೆ ಅವಲಂಬಿತವಾಗಿರುತ್ತಾರೆ. ಏಕೆಂದರೆ ಇದರಿಂದ ನಮ್ಮ ಸಮಯವನ್ನು ಸಹ ಕಾಪಾಡಿಕೊಳ್ಳಬಹುದು ಹಾಗೂ ಯಾವುದೇ ಟ್ರಾಫಿಕ್ ಸಮಸ್ಯೆ ಇರುವುದಿಲ್ಲ. ಇದರಿಂದ ನಾವು ಎಲ್ಲಿಗೆ ಬೇಕಾದರೂ ಸರಿಯಾದ ಸಮಯಕ್ಕೆ ಹೋಗಬಹುದು. ನಷ್ಟದಲ್ಲಿ ಸಾಗುತ್ತಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ನಡುವೆ ನಮ್ಮ ಮೆಟ್ರೋ ಲಾಭದ ಹಳಿಗೆ ಮರಳಿದೆ. ಮೊದಲ ಬಾರಿಗೆ ನಷ್ಟದ ಹಾದಿಯಿಂದ ಲಾಭದ ಹಾದಿಗೆ ಬಂದಿರುವ ನಮ್ಮ ಮೆಟ್ರೋ, ಕಳೆದ 9 ತಿಂಗಳಿನಲ್ಲಿ ಬಿಎಂಆರ್​ಸಿಎಲ್​​ಗೆ ಬರೊಬ್ಬರಿ 450 ಕೋಟಿ ರೂ. ಆದಾಯ ಗಳಿಸಿಕೊಟ್ಟಿದೆ. ಮೆಟ್ರೋ ಜಾಲ ವಿಸ್ತರಣೆ, ನಿಲ್ದಾಣ ಹಾಗೂ ರೈಲಿನ ಒಳಗೆ ಜಾಹೀರಾತಿಗೆ ಅವಕಾಶ ನೀಡಿರುವುದು ಆದಾಯ ಏರಿಕೆಗೆ ನೆರವಾಗಿದೆ ಎನ್ನಲಾಗಿದೆ.

ಮೆಟ್ರೋ ಫಿಡರ್ ಬಸ್ ಹೆಚ್ಚಳ ಮಾಡಿದ್ದು ಕೂಡ ಪ್ರಯಾಣಿಕರ ಹೆಚ್ಚಳಕ್ಕೆ ಕಾರಣವಾಗಿದೆ. 2023ರ ಜನವರಿಯಲ್ಲಿ ಪ್ರತಿ ನಿತ್ಯ ಸುಮಾರು 5.32 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆ ಆಗುತ್ತಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಕಳೆದ ಒಂದೇ ವರ್ಷದಲ್ಲಿ ಸುಮಾರು ಶೇಕಡಾ 30 ರಷ್ಟು ಏರಿಕೆಯಾಗಿದೆ. ಈಗ ಪ್ರತಿನಿತ್ಯ ಸರಾಸರಿ 6.88 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos