ವ್ಯಾಪಾರಿಗಳ ಮೇಲೆ ಖಾಕಿ ದರ್ಬಾರ

ವ್ಯಾಪಾರಿಗಳ ಮೇಲೆ ಖಾಕಿ ದರ್ಬಾರ

ಕೊಪ್ಪಳ, ಡಿ. 13 : ಹನುಮ ಜನಿಸಿದ ನಾಡು ಅಂಜನಾದ್ರಿಯಲ್ಲಿ ಬೀದಿಬದಿ ಬಡವ್ಯಾಪಾರಿಗಳ ಮೇಲೆ ಇದೀಗ ಖಾಕಿ ತನ್ನ ದರ್ಬಾರ್ ಮಾಡುತ್ತಿದೆ. ಖಾಕಿಯ ದರ್ಬಾರ್ ಗೆ ಸುಮಾರು ವರ್ಷಗಳಿಂದ ಕಾಯಿ- ಕರ್ಪೂರ ಮಾರುತ್ತಿದ್ದವರ ಬದಕು ಇದೀಗ ಬೀದಿಗೆ ಬಂದಿದೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಈ ಘಟನೆ ನಡೆದಿದ್ದು, ಸಣ್ಣಪುಟ್ಟ ಅಂಗಡಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದವರ ಮೇಲೆ ಖಾಕಿ ಕಣ್ಣು ಬಿದ್ದಿದೆ. ಸುಮಾರು ವರ್ಷಗಳಿಂದ ಅಂಜನಾದ್ರಿಯಲ್ಲೆ ಬೀದಿ ಬದಿಯಲ್ಲಿ ಹಣ್ಣು- ಹಂಪಲು, ಕಾಯಿ- ಕರ್ಪೂರ, ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದವರ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್ಐ ದೊಡ್ಡಪ್ಪನ ಕಣ್ಣು ಬಿದ್ದಿದೆ.
ರಾತ್ರಿ ವೇಳೆ ಅಂಜನಾದ್ರಿಗೆ ಆಗಮಿಸಿದ ಪೊಲೀಸರು ಅಂಗಡಿಯಲ್ಲಿ ಯಾರೂ ಇಲ್ಲದ ವೇಳೆ ಏಕಾಏಕಿ ಗೂಡಂಗಡಿಗಳನ್ನು ಕಿತ್ತೆಸೆದಿದ್ದಾರೆ. ವಿಷಯ ತಿಳಿದ ಅಂಗಡಿಯವರು ರಾತ್ರಿಯೇ ಗಂಗಾವತಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಆದರೆ ಮಹಿಳೆಯರು ಎಂಬುದನ್ನು ನೋಡದೆ ಠಾಣೆಯಲ್ಲಿಯೂ ಅವರನ್ನು ಬಾಯಿಗೆ ಬಂದ ಹಾಗೆ

ಫ್ರೆಶ್ ನ್ಯೂಸ್

Latest Posts

Featured Videos