ಮಹಿಳಾ ಎಂಪವರ್ಮೆಂಟ್ ಪಾರ್ಟಿ ಅಧ್ಯಕ್ಷೆ ನೌಹೀರಾ ಶೇಖ್ ಬಂಧನ

ಮಹಿಳಾ ಎಂಪವರ್ಮೆಂಟ್ ಪಾರ್ಟಿ ಅಧ್ಯಕ್ಷೆ ನೌಹೀರಾ ಶೇಖ್ ಬಂಧನ

ಬೆಂಗಳೂರು, ಮಾ, 30, ನ್ಯೂಸ್ ಎಕ್ಸ್ ಪ್ರೆಸ್: ಎಂಇಪಿ ಪಕ್ಷದ ಅಧ್ಯಕ್ಷೆ ನೌಹೀರಾ ಶೇಖ್ ಅವರನ್ನು ವಂಚನೆ ಆರೋಪದ ಮೇಲೆ ಭಾರತೀನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ಬಂಧಿಸಿದ್ದ ನೌಹೀರಾ ಶೇಖ್ ನ್ಯಾಯಾಂಗ ವಶದಲ್ಲಿದ್ದರು. ಇದೀಗ ವಂಚನೆ ಪ್ರಕಟರಣದಲ್ಲಿ ವಿಚಾರೆಗೆ ಕೋರಿ ಅಲ್ಲಿನ ನ್ಯಾಯಾಲಯಕ್ಕೆ ಬಾಡಿ ವಾರಂಟ್ ಅರ್ಜಿ ಸಲ್ಲಿಸಲಾಗಿತ್ತು. ಎಂಇಪಿ ಅಧ್ಯಕ್ಷೆ ಸೇರಿ ಹಲವರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆಗೆ ಯತ್ನ ನ್ಯಾಯಾಲಯ ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ನಗರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೀಬಾ ತಬಸ್ಸುಮ್ ಎಂಬುವರು ಕಳೆದ ನ.9ರಂದು ಭಾರತೀನಗರ ಠಾಣೆಗೆ ದೂರು ನೀಡಿದ್ದರು. ಹೀರಾ ಗ್ರೂಪ್ ಆಫ್ ಕಂಪನೀಸ್ ಸಿಇಒ ನೌಹೀರಾ ಶೇಖ್, ಹೈದರಾಬಾದ್‌ನ ಕುಕ್ಕಟಪಲ್ಲಿಯಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ನಗರದ ನ್ಯೂ ಬಂಬೂ ಬಜಾರ್‌ನಲ್ಲಿ ಕಚೇರಿ ತೆರೆದಿದ್ದರು. ಹೀರಾ ಗೋಲ್ಡ್ ಎಕ್ಸಿಮ್ ಲಿ. ಹೀರಾ ಟೆಕ್ಸ್‌ಟೈಲ್ಸ್ ಲಿ. ಹೀರಾ ಫುಡೇಕ್ಸ್ ಪ್ರೈ. ಲಿಮಿಟೆಡ್ ಒಳಗೊಂಡ ಹೀರಾ ಗ್ರೂಪ್ ಆಫ್ ಕಂಪನೀಸ್ ಗೆ ಸಿಇಒ ಮತ್ತು ನಿರ್ದೇಶಕಿ ಎಂದು ಹೇಳಿದ್ದ ನೌಹೀರಾ, ಹೆಚ್ಚು ಹಣ ಕೊಡುವುದಾಗಿ ಹೇಳಿ ಹಣ ಹೂಡಿಕೆಗೆ ಕೋರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos