‘ರಿಯಲ್ ಹೀರೋ’ ಜೊತೆ ಸೆಲ್ಫೀ ಪಡೆದ ಹೀರೋಯಿನ್ ಮೇಘನಾ ಗಾಂವ್ಕರ್!

‘ರಿಯಲ್ ಹೀರೋ’ ಜೊತೆ ಸೆಲ್ಫೀ ಪಡೆದ ಹೀರೋಯಿನ್ ಮೇಘನಾ ಗಾಂವ್ಕರ್!

ಬೆಂಗಳೂರು, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಒಂದು ರಾತ್ರಿ ನಟಿ ಮೇಘನಾ ಗಾಂವ್ಕರ್ ಸಿನಿಮಾಗೆ ಹೋಗಿದ್ದರು. ತಮ್ಮ ಕಾರ್ ಅನ್ನು ಪಾರ್ಕ್ ಮಾಡಿ ಪಕ್ಕದಲ್ಲಿ ಇದ್ದ ಸಿನಿಮಾ ಹಾಲ್ ನಲ್ಲಿ ಸಿನಿಮಾ ನೋಡುತ್ತಿದ್ದರು. ಅವರು ವಾಪಸ್ ಬರುವಾಗ ರಾತ್ರಿ ತುಂಬ ಲೇಟ್ ಆಗಿತ್ತು. ವಾಪಸ್ ಬಂದು ನೋಡಿದರೆ, ಕಾರ್ ಪಾರ್ಕಿಂಗ್ ನಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿ ಅಲ್ಲೇ ನಿಂತಿದ್ದರು. ಕಾರ್ ಕಿಟಕಿಯನ್ನು ಸರಿಯಾಗಿ ಮುಚ್ಚಿರಲಿಲ್ಲ ಸಿನಿಮಾದಿಂದ ವಾಪಸ್ ಬಂದರು ಪಾರ್ಕಿಂಗ್ ನಲ್ಲಿ ಆ ವ್ಯಕ್ತಿ ಅಲ್ಲಿಯೇ ನಿಂತಿದ್ದರು. ಪಾರ್ಕಿಂಗ್ ದುಡ್ಡನ್ನು ಈಗಾಗಲೇ ಕೊಟ್ಟಿದ್ದರೂ ಇವರು ಯಾಕೆ ಇಲ್ಲಿಯೇ ನಿಂತಿದ್ದಾರೆ ಎಂದು ಮೇಘನಾ ಮನಸ್ಸಿನಲ್ಲಿಯೇ ಪ್ರಶ್ನೆ ಕೇಳಿಕೊಂಡರು. ಆಮೇಲೆ ತಿಳಿಯಿತು ತಾನು ತನ್ನ ಕಾರ್ ಕಿಟಕಿಯನ್ನು ಸರಿಯಾಗಿ ಮುಚ್ಚದೆ ಸಿನಿಮಾ ಹೋಗಿರುವುದು.

ಮೇಘನಾ ವಾಪಸ್ ಬರುವ ವರೆಗೆ ಅಲ್ಲಿಯೇ ಕಾದರು ಆತುರದಲ್ಲಿ ಸಿನಿಮಾಗೆ ಹೋಗುವಾಗ ಕಾರ್ ಕಿಟಕಿಯನ್ನು ಮುಚ್ಚದೆ ಮೇಘನಾ ಹೋಗಿದ್ದರು. ಇದನ್ನು ಯಾವುದು ಕಳ್ಳರು ಅನುಕೂಲ ಪಡೆದುಕೊಳ್ಳಬಾರದು ಎಂದು ಆ ವ್ಯಕ್ತಿ ಅಲ್ಲಿಯೇ ಕಾಯುತ್ತಿದ್ದರು. ಮೇಘಾನಾ ಸಿನಿಮಾ ನೋಡಿ ವಾಪಸ್ ಬರಲು ಹೆಚ್ಚು ಕಡಿಮೆ ಮೂರು ಗಂಟೆಗಳ ಸಮಯ ಆಗಿತ್ತು. ಆದರೂ ಆ ವ್ಯಕ್ತಿ ಅಲ್ಲಿಯೇ ಕಾದು ಮೇಘನಾ ಬಂದ ನಂತರ ಕಿಟಕಿ ವಿಷಯವನ್ನು ತಿಳಿಸಿದರು. ತಾವು ಯಾರು ಅಂತ ತಿಳಿಯದೆ ಆ ಮಾಡಿದ ಸಹಾಯಕ್ಕೆ ಮೇಘನಾ ತುಂಬ ಖುಷಿಪಟ್ಟಿದ್ದಾರೆ. ಆ ವ್ಯಕ್ತಿಗೆ ಧನ್ಯವಾದ ತಿಳಿಸಿರುವ ಅವರು ಅವರ ಜೊತೆಗೆ ತಾವೇ ಕೇಳಿ ಫೋಟೋ ತೆಗೆದುಕೊಂಡಿದ್ದಾರೆ. ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಬಳಿ ಮೇಘನಾ ತಾವೇ ಫೋಟೋ ಕೇಳಿ ಪಡೆದುಕೊಂಡಿದ್ದಾರಂತೆ. ಜೊತೆಗೆ ಅವರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳ ಬರೆದುಕೊಂಡಿದ್ದಾರೆ. ಆ ವ್ಯಕ್ತಿಯ ಮಾನವೀಯತೆ ಕಂಡು ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos