ಕೃಷಿ ವಿಜ್ಞಾನಿಗಳ ಭೇಟಿ: ಬೇವಿನಿಂಡಿ ವಿತರಣೆ

ಕೃಷಿ ವಿಜ್ಞಾನಿಗಳ ಭೇಟಿ: ಬೇವಿನಿಂಡಿ ವಿತರಣೆ

ಕುಣಿಗಲ್: ತಾಲೂಕಿನ ಗುನ್ನಾಗರೆ ಗ್ರಾಮದಲ್ಲಿ ತಿಪಟೂರಿನ ಕೊನೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಪರಂಪರಾಗತ ವಿಕಾಸ ಯೋಜನೆಯ ಫಲಾನುಭವಿಗಳ ಭೂಮಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ರೈತರು ಬೆಳೆಯಲು ಗಂಗಾವತಿ ಸೋನಾ ಭತ್ತ ಕೆಎಂಆರ್ ೬೩೦ ರಾಗಿ ವಿವಿಧ ತಳಿಯ ಮೇವಿನ ಬೀಜಗಳು ತೆಂಗಿನ ತೋಟಗಳಿಗೆ ಹಸಿರೆಲೆ ಗೊಬ್ಬರಗಳ ಬೀಜಗಳು ತೆಂಗಿನ ಮರಗಳಿಗೆ ಬೇವಿನ ಹಿಂಡಿಯನ್ನು ವಿತರಿಸಲಾಗಿತ್ತು.
ಫಲಾನುಭವಿಗಳ ತೋಟಕ್ಕೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳ ಮುಖ್ಯಸ್ಥರಾದ ಡಾಕ್ಟರ್ ನಟರಾಜ್ ತಿಪಟೂರಿನ ಒಆರ್ ಕೃಷಿ ವಿಜ್ಞಾನ ಡಾಕ್ಟರ್ ಶ್ರೀನಿವಾಸ್ ಕೆಆರ್ ವಿಜ್ಞಾನಿಗಳು (ಸಸ್ಯ ಸಂರಕ್ಷಣೆ) ತಿಪಟೂರು ಡಾಕ್ಟರ್ ನಾಗಪ್ಪ ದೇಸಾಯಿ ವಿಜ್ಞಾನಿಗಳು (ತೋಟಗಾರಿಕೆ )ಕೃಷಿ ವಿಜ್ಞಾನ ಇವರುಗಳು ರೈತರ ತಾಕುಗಳಿಗೆ ಭೇಟಿ ನೀಡಿ ತಳಿಗಳ ಬಗ್ಗೆ ರೋಗನಿರೋಧಕ ಶಕ್ತಿ ಕೀಟಬಾಧೆ ರೋಗಭಾದೆ ಬೆಳಗ್ಗೆ ರೈತರ ಅನಿಸಿಕೆಗಳನ್ನು ವಿಚಾರಿಸಿದರು.
ಡಾಕ್ಟರ್ ಶ್ರೀನಿವಾಸ್ ಕೆಆರ್ ವಿಜ್ಞಾನಿಗಳು ರೈತ ತೆಂಗಿನಲ್ಲಿ ಸಿಗುವ ಉಪ ಉತ್ಪನ್ನಗಳಾದ ತೆಂಗಿನ ಎಡೆಮಟ್ಟೆ ತೆಂಗಿನ ಗರಿಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ ಇದನ್ನು ತಪ್ಪಿಸಲು ಈ ಗ್ರಾಮಕ್ಕೆ ತೆಂಗಿನ ಎಡೆ ಮಟ್ಟೆ ಹೊಡೆಯುವ ಯಂತ್ರವನ್ನು ಯಾರಾದರೂ ಟ್ಯಾಕ್ಟರ್ ಇರುವಂತಹ ರೈತರು ಖರೀದಿ ಮಾಡಿದರೆ ಗಂಟೆಯ ರೂಪದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಯೋಜನೆಯ ಮೂಲಕ ಬಾಡಿಗೆ ನೀಡುತ್ತೇವೆ ಇದನ್ನು ಈ ಗ್ರಾಮದ ಎಲ್ಲಾ ರೈತರು ಉಪಯೋಗಿಸಿಕೊಂಡು ಸಾವಯವ ಉತ್ಪನ್ನಗಳನ್ನು ಬಳಸಬೇಕೆಂದು ರೈತರಿಗೆ ಕಿವಿಮಾತು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos