ನಟಿ ‘ಮೀರಾ ಜಾಸ್ಮಿನ್’ ತಂದೆ ವಿಧಿವಶ

ನಟಿ ‘ಮೀರಾ ಜಾಸ್ಮಿನ್’ ತಂದೆ ವಿಧಿವಶ

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಜೊತೆ ನಟನೆ ಮಾಡಿದ ಮೀರಾ ಜಾಸ್ಮಿನ್ ಅವರು ತಂದೆ ಜೋಸೆಫ್ ಫಿಲಿಪ್ ಕೇರಳದ ಎರ್ನಾಕುಲಂನಲ್ಲಿ ನಿಧನರಾಗಿದ್ದಾರೆ. ಕನ್ನಡದ ಅರಸು ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡರು.

ಮಲಯಾಳಂ, ಕನ್ನಡ ಸೇರಿ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿದ ನಟಿ ಮೀರಾ ಜಾಸ್ಮಿನ್ ಅವರ ತಂದೆ ಜೋಸೆಫ್ ಫಿಲಿಪ್ ಕೇರಳದ ಎರ್ನಾಕುಲಂನಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಮೀರಾ ಅವರ ತಂದೆ ವಯೋಸಹಜ ಖಾಯಿಲೆಯಿಂದ ನಿಧನರಾದರು ಎಂದು ವರದಿಗಳು ತಿಳಿಸಿದೆ. ಅವರ ಅಂತ್ಯಕ್ರಿಯೆ ಭಾನುವಾರ ಕೇರಳದಲ್ಲಿ ನಡೆಯಲಿದೆ.ನಟಿ ತನ್ನ ತಂದೆಯ ನಿಧನದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos