ಮೀನು ಸಾಕಾಣಿಕೆ ಗಾರರ ಮೇಲೆ ಪ್ರಕರಣ!? 

ಮೀನು ಸಾಕಾಣಿಕೆ ಗಾರರ ಮೇಲೆ ಪ್ರಕರಣ!? 

ದೇವನಹಳ್ಳಿ, ಜು. 18 : ಹೊಸ ಕೋಟೆ ತಾಲೂಕಿನ ನಂದ ಗುಡಿ, ಬೈಲಾ ನರಸಾ ಪುರ , ಎಸ್ ಹೊಸಹಳ್ಳಿ , ಬಂಡೇನ ಹಳ್ಳಿ ಸುತ್ತಮುತ್ತಲಿನ ಲ್ಲಿ ಆಫ್ರಿಕನ್ ಕ್ಯಾಟ್ ಫಿಷ್ ಅಕ್ರಮ ಸಾಕಾಣಿಕೆ ಕೇಂದ್ರಗಳ ಮೇಲೆ ದಾಳಿ ನಡೆಸಿ 22 ಮಂದಿ ಭೂ ಮಾಲೀಕರು ಹಾಗೂ  34 ಮಂದಿ ಮೀನು ಸಾಕಾಣಿಕೆ ಗಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆ ಅಧಿಕಾರಿ ಎಸ್ ಆರ್ ನಾಗರಾಜ್ ತಿಳಿಸಿದರು.

ತಾಲುಕಿನ ಚಪ್ಪರದ ಕಲ್ಲು ಸರ್ಕಲ್ ನಲ್ಲಿರುವ ಜಿಲ್ಲಾಡಳಿತ ಭವನದ ಮೀನುಗಾರಿಕೆ ಇಲಾಖೆಯ ಕಚೇರಿಯಲ್ಲಿ ಆಫ್ರಿಕನ್ ಕ್ಯಾಟ್ ಫಿಷ್ ಅಕ್ರಮ ಸಾಕಾಣಿಕೆ ಆರೋಪಿಗಳ ಪಟ್ಟಿ ಬಿಡುಗಡೆ ಗೊಳಿಸಿ ಮಾತನಾಡಿದರು. ಹೊಸ ಕೋಟೆ ತಾಲೂಕಿನ ನಂದ ಗುಡಿ , ಬೈಲಾ ನರಸಾ ಪುರ , ಎಸ್ ಹೊಸಹಳ್ಳಿ , ಬಂಡೇನ ಹಳ್ಳಿ ಸುತ್ತಮುತ್ತಲಿನಲ್ಲಿ ಕೆಲವು ಮೀನು ಸಾಗಾನಿಕೆ ಗಾರರು ಸ್ವಂತ ಜಮೀನಿನಲ್ಲಿ ಹೊಂಡ ನಿರ್ಮಿಸಿ ಮೀನು ಕೃಷಿ ಯಲ್ಲಿ ತೊಡಗಿದ್ದಾರೆ. ಇನ್ನೂ ಕೆಲವರು ಜಮೀನನ್ನು ಗುತ್ತಿಗೆ ಪಡೆದು ಸಾಕಾಣಿಕೆ ಮಾಡುತ್ತಿರುವುದು ಪರಿಶೀಲನೆ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ. 38 ಪ್ರಕರಣಗಳಲ್ಲಿ 52 ಸಾಕಾಣಿಕೆ ದಾರರಿದ್ದಾರೆ. ಸಾಕಾಣಿಕೆ ಗುಂಡಿ ನೆಲಸಮಕ್ಕೆ ಖಾಸಗಿ ಅವರು ಮುಂದಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆಯಾ ಪ್ರಕರಣವನ್ನು ಗ್ರಾಮಗಳ ವ್ಯಾಪ್ತಿಯಲ್ಲಿನ ಪೋಲೀಸ್ ಠಾಣೆಗಳಲ್ಲಿ ದಾಖಲು ಮಾಡಲು ಪಟ್ಟಿ ನೀಡಲಾಗಿದೆ ಎಂದು ಹೇಳಿದರು.

ಇತ್ತೀಚಿಗೆ ನಡೆದ ಜಿಪಂ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜಯಮ್ಮ, ನಂದಗುಡಿ ಜಿಪಂ ಸದಸ್ಯ ನಾಗರಾಜ್, ಆಫ್ರಿಕನ್ ಕ್ಯಾಟ್ ಫಿಷ್ ಸಾಕಾಣಿಕೆ ಕೇಂದ್ರದ ಮೇಲೆ ಸೂಕ್ತ ಕ್ರಮ ಕೈಗೊಂಡಿಲ್ಲ. ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅದರ ಅನ್ವಯ ಮೀನು ಸಾಕಾಣಿಕೆ ಕೇಂದ್ರಗಳ ಪರಿಶೀಲನೆ ನಡೆಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದರು.

ಮೀನು ಸಾಕಾಣಿಕೆ ಆರೋಪಿಗಳು ಬೈಲಾ ನರಸಾಪುರ ಶಾಬು ಜಾನ್, ಮಾಶೂದ್ ಖಾನ್, ಶಾವರ್, ಶೆಕತ್ ಆಲಿಖಾನ್,  ಬಂಡೇನ ಹಳ್ಳಿ ಅಹಮದ್ ಖಾನ್, ಎನ್ ಹೊಸಹಳ್ಳಿ ಇಕ್ಬಾಲ್ ಖಾನ್, ಬಾಬಾಜಾನ್, ಅಸ್ಲಾಂ ಪಾಷಾ, ಇತರರ ಮೇಲೆ ದೂರಿನ ಪಟ್ಟಿ ತಯಾರಿಸಲಾಗಿದೆ ಎಂದರು.

 

 

ಫ್ರೆಶ್ ನ್ಯೂಸ್

Latest Posts

Featured Videos