ಹುಣಸೆಯಲ್ಲಿ ಚಿಕುನ್‌ಗುನ್ಯಕ್ಕೆ ಔಷಧ?

ಹುಣಸೆಯಲ್ಲಿ ಚಿಕುನ್‌ಗುನ್ಯಕ್ಕೆ  ಔಷಧ?

ಹೊಸದಿಲ್ಲಿ: ಹುಣಸೇ ಬೀಜದಲ್ಲಿ ಚಿಕುನ್‌ಗುನ್ಯ ಮಾತ್ರವಲ್ಲದೆ ಎಚ್‌ಐವಿ ಹಾಗೂ ಎಚ್‌ಪಿವಿಗೆ ಕಾರಣವಾಗುವ ವೈರಸ್‌ಗಳ ವಿರುದ್ಧ ಹೋರಾಡುವ “ಲೆಕ್ಟಿನ್‌’ ಪ್ರೊಟೀನೊಂದನ್ನು ಪತ್ತೆ ಹಚ್ಚಿರುವುದಾಗಿ ರೂರ್ಕಿ ಐಐಟಿಯ ಇಬ್ಬರು ಪ್ರೊಫೆಸರ್‌ಗಳು ತಿಳಿಸಿದ್ದಾರೆ. ಹುಣಸೇ ಕಾಯಿ, ಹುಣಸೇ ಹಣ್ಣು, ನಾರು, ಎಲೆಗಳಲ್ಲಿ ಔಷಧೀಯ ಗುಣವಿರುವುದರಿಂದಲೇ ಅದನ್ನು ನಮ್ಮ ಊಟಗಳಲ್ಲಿ, ಆಯು ರ್ವೇದದಲ್ಲಿ ಶತಮಾನಗಳಿಂದ ಬಳಸಲಾಗುತ್ತದೆ. ಹೊಟ್ಟೆ ನೋವು, ಅತಿಸಾರ ಭೆೇದಿ, ಬ್ಯಾಕ್ಟೀರಿಯಾ ಸೋಂಕು, ಗಾಯ, ಮಲಬದ್ಧತೆ ಹಾಗೂ ಉರಿ ಯೂತದಂಥ ಸಮಸ್ಯೆಗಳಿಗೆ ಹುಣಸೇ ಹಣ್ಣು ರಾಮಬಾಣವಾಗಿರುವುದರಿಂದ ಇದನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದಿರುವ ಪ್ರೊಫೆಸರ್‌ಗಳಲ್ಲೊಬ್ಬರಾದ ಶೈಲಿ ತೋಮರ್‌, ಇದರ ಹಕ್ಕು ಸ್ವಾಮ್ಯಕ್ಕಾಗಿ (ಪೇಟೆಂಟ್‌) ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos