ಬಿಲ್ವಪತ್ರೆಯ ಔಷಧಿ ಗುಣಗಳು

ಬಿಲ್ವಪತ್ರೆಯ ಔಷಧಿ ಗುಣಗಳು

ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಕಷ್ಟಕರವಾಗಿದೆ. ನಾವು ಜೀವನ ನಡೆಸುವುದು ಸಹ ತುಂಬಾ ಕಷ್ಟವಾಗಿದೆ. ನಾವು ದಿನನಿತ್ಯ ಬಳಸುವಂತಹ ಪದಾರ್ಥಗಳಲ್ಲಿ ನಮ್ಮ ಆರೋಗ್ಯ ಅಡಗಿದೆ ಅದನ್ನು ನಾವು ಸರಿಯಾದ ಕ್ರಮದಲ್ಲಿ ಬಳಸಿದರೆ ನಾವು ಆರೋಗ್ಯವಂತರಾಗಿ ಇರಬಹುದು.
ಆಯುರ್ವೇದದ ಪ್ರಕಾರ ಬಿಲ್ವಪತ್ರೆಯು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಬಿಲ್ವಪತ್ರೆಯ ಮರದ ಪ್ರತಿಯೊಂದು ಭಾಗವು, ಎಂದರೆ ಬೇರು, ತೊಗಟೆ, ಪತ್ರೆ ಹಾಗೂ ಕಾಯಿ ಹಣ್ಣು ಎಲ್ಲವೂ ಔಷಧಿ ಗುಣಗಳನ್ನು ಹೊಂದಿದೆ.
ಬಿಲ್ವಪತ್ರೆಯನ್ನು ಭಾರತೀಯ ಸನಾತನ ಸಂಸ್ಕ್ರತಿಯಲ್ಲಿ ಪವಿತ್ರ ಮರ ಎಂದೇ ಹೇಳಲಾಗುತ್ತದೆ. ಪುರಾಣಗಳಲ್ಲಿ ಹೇಳಿದಂತೆ ಬಿಲ್ವಪತ್ರೆಯು ಶಿವನಿಗೆ ಅತ್ಯಂತ ಪ್ರಿಯವಾಗಿದೆ. ಆದ್ದರಿಂದ ಶಿವರಾತ್ರಿಯ ದಿನ ತಪ್ಪದೇ ಬಿಲ್ವಪತ್ರೆ ತಂದು ಶಿವನಿಗೆ ಅರ್ಪಿಸಿ ಪೂಜಿಸುತ್ತಾರೆ.
ಬಿಲ್ವಪತ್ರೆಯ ಎಲೆಗಳನ್ನ ನೀರು ಸೇರಿಸಿ, ಅರೆದು, ಆ ಮಿಶ್ರಣವನ್ನು ಕಣ್ಣುಗಳ ರೆಪ್ಪೆಯ ಮೇಲೆ ಹಚ್ಚುವುದರಿಂದ ದೃಷ್ಟಿ ವೃದ್ಧಿಯಾಗುತ್ತದೆ. ಅಲ್ಲದೆ ಬಿಲ್ವಪತ್ರೆಯನ್ನು ರಾತ್ರೆ ನೀರಿನಲ್ಲಿ ನಿನಸಿಟ್ಟು ಬೆಳಿಗ್ಗೆ ಅದರಿಂದ ಕಣ್ಣನ್ನು ತೊಳೆಯುವುದರಿಂದ ಕಣ್ಣಿನ ಉರಿ, ಕಣ್ಣಿನ ತುರಿಕೆಗಳಿಂದ ಕಣ್ಣಿನ ರಕ್ಷಣೆ ಮಾಡುತ್ತದೆ.
ಬಿಲ್ವಪತ್ರೆ ಎಲೆಯ ಎಣ್ಣೆಯನ್ನು ತಯಾರಿಸಿ, 3 ರಿಂದ 4 ಡ್ರಾಪ್ ಎಣ್ಣೆಯನ್ನು ಕಿವಿಗೆ ಬಿಡುವುದರಿಂದ ಕಿವುಡುತನ ಕಡಿಮೆಯಾಗುತ್ತದೆ.
ದೇಹದ ದುರ್ಗಂಧವನ್ನು ನಿವಾರಿಸಲು, ಬಿಲ್ವಪತ್ರೆಯ ಎಲೆಯ ರಸವನ್ನು, ಪ್ರತಿ ದಿನ ಮೈಗೆ ಹಚ್ಚಿಕೊಂಡು, ಅರ್ಧ ಘಂಟೆಯ ನಂತರ ಬಿಟ್ಟು ಸ್ನಾನ ಮಾಡುವುದರಿಂದ, ದೇಹದ ದುರ್ಗಂಧವನ್ನು ತಡೆಗಟ್ಟಬಹುದು.
ಪ್ರತಿ ದಿನ ಬಿಲ್ವಪತ್ರೆಯ ರಸವನ್ನು 2 ರಿಂದ 3 ಚಮಚ ಸೇವಿಸುತ್ತಿದ್ದರೆ ನಿಶ್ಯಕ್ತಿ ದೂರವಾಗುತ್ತದೆ. ಬಾಯಿಯಲ್ಲಿ ಹುಣ್ಣಾದಾಗ, ಬಿಲ್ವಪತ್ರೆಯ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ, ದಿನದಲ್ಲಿ 2 ಬಾರಿ ಸೇವಿಸುವುದರಿಂದ, ಬಾಯಿಯ ಹುಣ್ಣು ಕಡಿಮೆಯಾಗುತ್ತದೆ.
ಬಿಲ್ವಪತ್ರೆಯ ಹಣ್ಣಿನ ತೊಗಟೆಯನ್ನು ಅರೆದು, ಜೇನು ತುಪ್ಪದಲ್ಲಿ ಸೇವಿಸುವುದರಿಂದ ವಾಂತಿ ಮತ್ತು ವಾಕರಿಕೆ ಬರುವುದು ಕಡಿಮೆಯಾಗುತ್ತದೆ. ಹೃದಯ ಬಡಿತದ ಸಮಸ್ಯೆ ಇದ್ದವರು ಬಿಲ್ವಪತ್ರೆಯ ಬೇರಿನ ತೊಗಟೆಯನ್ನು ಒಣಗಿಸಿ ಪುಡಿ ಮಾಡಿಕೊಂಡು ಅದನ್ನು ಅಧಿಕ ರಕ್ತದೊತ್ತಡವಾದಾಗ 1/2 ಅಥವಾ 1 ಚಮಚ ಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸಿ, ಕಷಾಯ ಮಾಡಿಕೊಂಡು, ತಣಿಸಿ, ದಿನಕ್ಕೆ 2-3 ಬಾರಿ ಕುಡಿಯಬೇಕು.

ಫ್ರೆಶ್ ನ್ಯೂಸ್

Latest Posts

Featured Videos