ಅಂದೆಯ ಪಾತ್ರದಲ್ಲಿ ಮಯುರಿ

ಅಂದೆಯ ಪಾತ್ರದಲ್ಲಿ ಮಯುರಿ

ಬೆಂಗಳೂರು, ಮೇ. 31, ನ್ಯೂಸ್ ಎಕ್ಸ್ ಪ್ರೆಸ್: ಮಯೂರಿ ನಟಿಸಿದ ಮೊದಲ ಚಿತ್ರ ‘ಕೃಷ್ಣ ಲೀಲಾ’ ಚಿತ್ರವು ಶತದಿನ ಪೂರೈಸುವುದರೊಂದಿಗೆ ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಿತ್ತು.

ಹೌದು, ‘ಕೃಷ್ಣಲೀಲಾ’ ಚಿತ್ರದ ಬಳಿಕ ಮಯೂರಿ ‘ಇಷ್ಟಕಾಮ್ಯ’, ‘ನಟರಾಜ ಸರ್ವಿಸ್’, ‘ಕರಿಯ-2’, ‘ಜಾನಿ ಜಾನಿ ಎಸ್ ಪಪ್ಪಾ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಈಗಲೂ ಸಹ ಬ್ಯೂಸಿಯಿರುವ ಅವರು ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸದ್ಯ ಮಯೂರಿ ನಟಿಸಿರುವ ‘ಮೌನಂ’ ಚಿತ್ರದ ಶೂಟಿಂಗ್ ಮುಗಿದಿದ್ದು, ಹೆಸರಿಡದ ಚಿತ್ರವೊಂದರಲ್ಲಿ ಕೊಳಗೇರಿ ನಿವಾಸಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಬೆಲೆವೆಣ್ಣು ಪಾತ್ರ. ಬೇರೆಯವರ ಒತ್ತಡಕ್ಕೆ ಮಣಿದು ಈ ವೃತ್ತಿಯನ್ನು ಸ್ವೀಕರಿಸಿದ ಹೆಣ್ಣುಮಗಳೊಬ್ಬಳ ಜೀವನದ ಕಥೆಗೆ ಜೀವ ತುಂಬಲಿದ್ದಾರೆ.

ಇನ್ನು ಶಿವಣ್ಣನೊಂದಿಗೆ ‘ರುಸ್ತುಂ’ ಹಾಗೂ ‘ಪೊಗರು’ ಚಿತ್ರದಲ್ಲಿ ಚಿತ್ರದಲ್ಲಿ ಧ್ರುವ ಸರ್ಜಾರಿಗೆ ಸಹೋದರಿಯಾಗಿ ಮಯೂರಿ ನಟಿಸುತ್ತಿದ್ದಾರೆ. ‘ನನ್ನ ಪ್ರಕಾರ’, ‘ಆಟಕ್ಕುಂಟು ಲೆಕ್ಕಕ್ಕಿಲ್ಲ’, ‘ಅನಾಧ್ಯಂತ’ ಚಿತ್ರಗಳು ಸೇರಿದಂತೆ , ನಟರಾಜ್ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ಅಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಹೀಗೆ ಹೇಳುತ್ತಾರೆ.

‘ನನ್ನ ಹೊರತಾಗಿ ಎಲ್ಲರೂ ಹೊಸಬರು ಚಿತ್ರದಲ್ಲಿದ್ದು, ನಟರಾಜ್ ಆಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಚಿತ್ರದ ಕತೆ ಹಾಗೂ ಪಾತ್ರದ ಕಾರಣಕ್ಕೆ ಒಪ್ಪಿಕೊಂಡಿದ್ದೇನೆ. ನನ್ನದು ಇಲ್ಲಿ ಬ್ಲೈಂಡ್ ಹುಡುಗಿಯ ಪಾತ್ರ. ರಾಮ್ ಚೇತನ್’

ಇನ್ನು ಥಿಲ್ಲರ್ ನೆರಳಿನಲ್ಲಿ ಮೂಡಿ ಬರುತ್ತಿರುವ ‘ಅನಾಥಿ’ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದು ಪುನೀತ್ ಶರ್ಮಾ ಈ ಚಿತ್ರದ ನಿರ್ದೇಶಕರು. ಹೀಗೆ ಒಟ್ಟಿಗೆ ಒಟ್ಟೊಟ್ಟಿಗೆ ಏಳೆಂಟು ಚಿತ್ರಗಳಲ್ಲಿ ಬ್ಯುಸಿಯಿದ್ದಾರೆ ಮಯೂರಿ.

ಫ್ರೆಶ್ ನ್ಯೂಸ್

Latest Posts

Featured Videos