ಏಕಕಾಲಕ್ಕೆ 5-6 ಚಿತ್ರಗಳಲ್ಲಿ ನಟಿಸುತ್ತಿರುವ ಮಯೂರಿ

ಏಕಕಾಲಕ್ಕೆ 5-6 ಚಿತ್ರಗಳಲ್ಲಿ ನಟಿಸುತ್ತಿರುವ ಮಯೂರಿ

ಬೆಂಗಳೂರು, ಮಾ.15, ನ್ಯೂಸ್ ಎಕ್ಸ್ ಪ್ರೆಸ್:  ‘ಕೃಷ್ಣಲೀಲಾ’ ಚಿತ್ರದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ನಗುಮುಖದ ಚಲುವೆ ಮಯೂರಿ ಅವರು ಈಗ 5-6 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಹೌದು, ಮಯೂರಿ 2019ರಲ್ಲಿ 5-6 ಚಿತ್ರಗಳಲ್ಲಿ ನಟಿಸುತ್ತಿದ್ದು, ವರ್ಷಪೂರ್ತಿ ಅವರು ಚಿತ್ರಮಂದಿರದಲ್ಲಿಯೇ ಇರುತ್ತಾರೆ ಎಂದು ಹೇಳಬಹುದು. ಈ ವರ್ಷ ಅವರು ನಟಿಸುತ್ತಿರುವ ಚಿತ್ರಗಳಲ್ಲಿ ಮಹಿಳಾ ಪ್ರಧಾನ ಚಿತ್ರವೂ ಇದೆ ಎಂಬುದು ವಿಶೇಷ. ಹೀಗಾಗಿ ನಗುಮುಖ ಮತ್ತು ನಟನೆಯ ಮೂಲಕ ಎಲ್ಲರ ಗಮನೆ ಸೆಳೆಯುತ್ತಿರುವ ಇವರು, ಬಹುಬೇಡಿಕೆಯ ಕನ್ನಡದ ನಟಿಯಾಗಿದ್ದಾರೆ.

ಸದ್ಯ ಮಯೂರಿ ಶಿವಣ್ಣನೊಂದಿಗೆ ‘ರುಸ್ತುಂ’ ಹಾಗೂ ‘ಪೊಗರು’ ಚಿತ್ರದಲ್ಲಿ ಧ್ರುವ ಸರ್ಜಾರಿಗೆ ಸಹೋದರಿಯಾಗಿ ನಟಿಸುತ್ತಿದ್ದಾರೆ. ಹಾಗೆಯೇ ‘ಮೌನಂ’, ‘ನನ್ನ ಪ್ರಕಾರ’, ‘ಆಟಕ್ಕುಂಟು ಲೆಕ್ಕಕ್ಕಿಲ್ಲ’, ‘ಅನಾಧ್ಯಂತ’ ಚಿತ್ರಗಳೊಂದಿಗೆ ಇನ್ನೂ ಹೆಸರಿಡದ ಚಿತ್ರವೊಂದರಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

‘ಹೌದು, ಈ ವರ್ಷ ನನಗೆ ಸಿಕ್ಕಾಪಟ್ಟೆ ಅವಕಾಶಗಳು ಅರಸಿ ಬರುತ್ತಿವೆ. ಹೀಗಾಗಿ ಪಾತ್ರ ಮತ್ತು ಕಥೆಯತ್ತ ಗಮನ ಹರಿಸಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತೇನೆ. ಇನ್ನು ಈಗ ನಟಿಸುತ್ತಿರುವ ಬಹುತೇಕ ಚಿತ್ರಗಳಲ್ಲಿ ನಾನು ಹೊಸ ಬಗೆಯ ಪಾತ್ರ ಮಾಡುತ್ತಿದ್ದೇನೆ. ಈ ಕುರಿತು ನನಗೆ ಹೆಮ್ಮೆಯಿದೆ.

ಈಗೀಗ ನನಗೆ ಇಷ್ಟವಾಗುವಂಥ ಪಾತ್ರಗಳೇ ಸಿಗುತ್ತಿವೆ. ಆದ್ದರಿಂದಲೇ ಈ ವರ್ಷ ನನಗೆ ಲಕ್ಕಿ ಯಿಯರ್. ಕನ್ನಡದಲ್ಲಿ ಮಾತ್ರವಲ್ಲ ಬೇರೆ ಭಾಷೆಯ ಸಿನಿಮಾಗಳ ಆಫರ್ ಕೂಡ ಬರುತ್ತಿವೆ. ಸೀರಿಯಲ್ ಮಾಡಲು ಕರೆಯುತ್ತಿದ್ದಾರೆ’ ಎನ್ನುತ್ತಾರೆ ಮಯೂರಿ.

 

ಫ್ರೆಶ್ ನ್ಯೂಸ್

Latest Posts

Featured Videos