ಮೇಯರ್- ಉಪಮೇಯರ್ ಮೂಹರ್ತ ಫಿಕ್ಸ್..?

ಮೇಯರ್- ಉಪಮೇಯರ್ ಮೂಹರ್ತ ಫಿಕ್ಸ್..?

ಬೆಂಗಳೂರು, ಸೆ.7: ಸೆಪ್ಟೆಂಬರ್ 28ಕ್ಕೆ ಹಾಲಿ ಮೇಯರ್ ಗಂಗಾಂಬಿಕೆ ಅವಧಿ ಅಂತ್ಯಗೊಳ್ಳಲಿದ್ದು, ಹೊಸ ಮೇಯರ್ ಆಯ್ಕೆಗೆ ಚುನಾವಣೆ ನಡೆಯಬೇಕಿದೆ. ಸೆ.28 ರಂದು ಮಹಾಲಯ ಅಮಾವಾಸ್ಯೆ ಇದ್ದು, ಸರ್ಕಾರಿ ರಜೆ ಇರುವುದರಿಂದ 27 ರಂದೇ ಮೇಯರ್ -ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಯುವುದು ಬಹುತೇಕ ಖಚಿತ.
ಹೊಸ ಮೇಯರ್ ಆಯ್ಕೆಗೆ ಮತದಾರರ ಪಟ್ಟಿ ಅಂತಿಮವಾಗಿದ್ದು, ಈಗಾಗಲೇ ಪ್ರಾದೇಶಿಕ ಆಯುಕ್ತರಿಗೆ ಅಧಿಕಾರಿಗಳು ಪಟ್ಟಿಯನ್ನು ರವಾನೆ ಮಾಡಿದ್ದಾರೆ. ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅವರು ಈಗಾಗಲೇ ಮೇಯರ್ ಚುನಾವಣಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು, ಮುಂದಿನ ವಾರ ವೇಳಾಪಟ್ಟಿ ಹೊರಬೀಳುವ ಸಾಧ್ಯತೆಗಳಿವೆ.

ಫ್ರೆಶ್ ನ್ಯೂಸ್

Latest Posts

Featured Videos