ಮಾಂಸದಂಗಡಿ ಮುಚ್ಚಲು ಮೇಯರ ಆದೇಶ

ಮಾಂಸದಂಗಡಿ ಮುಚ್ಚಲು ಮೇಯರ ಆದೇಶ

ಬೆಂಗಳೂರು, ಜೂ. 27 : ಬುಧವಾರ ರೋಸ್ ಗಾರ್ಡ್ ನ ಪ್ರದೇಶಕ್ಕೆ ಭೇಟೀ ನೀಟಿದ ಮೇಯರ್ ಗಂಗಾಬಿಕೆ ವಾರ್ಡ್ ನಲ್ಲಿರುವ ಅನಧಿಕೃತ ಮಾಂಸದಂಗಡಿಗಳನ್ನು ಮುಚ್ಚುವುದಾಗಿ ಆದೇಶ ನೀಡಿದ್ದಾರೆ. ರೋಸ್​ಗಾರ್ಡ್​ನ ಪ್ರದೇಶಕ್ಕೆ ಭೇಟಿ ನೀಡಿದ ಮೇಯರ್ ಅಲ್ಲಿನ ಸ್ಥಿತಿಗತಿ ವೀಕ್ಷಿಸಿದರು. ನೀಲಸಂದ್ರ ವಾರ್ಡ್​ನ ರೋಸ್​ಗಾರ್ಡನ್ ಪ್ರದೇಶದಲ್ಲಿ ನಾಯಿ ಕಡಿತದಿಂದ ಗಂಭೀರ ಗಾಯಗೊಂಡಿರುವ ಬಾಲಕಿ ಅನುಕೃಪಾ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸುವುದಾಗಿ ಮೇಯರ್ ಗಂಗಾಂಬಿಕೆ ಭರವಸೆ ನೀಡಿದ್ದಾರೆ. ನಂತರ ಆಸ್ಟಿನ್​ಟೌನ್ ನಲ್ಲಿರುವ ಬಿಬಿಎಂಪಿ ಬಾಲಕರ ಶಾಲೆಗೆ ಭೇಟಿ ನೀಡಿ ಬೀದಿನಾಯಿ ಗಳ ಹಾವಳಿ ಬಗ್ಗೆ ವಿದ್ಯಾರ್ಥಿ ಗಳಿಂದಲೇ ಮಾಹಿತಿ ಪಡೆದರು. ನಂತರ ಶಾಲಾ ಆವರಣದಲ್ಲೇ ನಾಯಿಗಳ ಹಿಂಡು ಕಂಡ ಅವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನೀಲಸಂದ್ರದ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚು ಮಾಂಸದಂಗಡಿಗಳು ಇರುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ ಎಂಬುದನ್ನು ತಿಳಿದ ಮೇಯರ್, ಪರವಾನಗಿ ಇಲ್ಲದೆ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಿದರು. ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡುವಂತೆಯೂ ಸೂಚಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos